
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಶಿಕ್ಷಣದ ವೇಳೆ ಹಾಸ್ಟೆಲ್ ಸೌಲಭ್ಯ ದೊರೆಯದ ಮಡಿವಾಳ ಸೇರಿ ಎಲ್ಲಾ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ‘ವಿದ್ಯಾಸಿರಿ’ ಯೋಜನೆಯಡಿ ನೀಡುತ್ತಿರುವ ಮಾಸಿಕ 1500 ರು. ವಿದ್ಯಾರ್ಥಿವೇತನವನ್ನು 2000 ರು.ಗಳಿಗೆ ಹೆಚ್ಚಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಡಿವಾಳರು ಸೇರಿ ಹಿಂದುಳಿದ ವರ್ಗದವರ ಮಕ್ಕಳು ನಗರ ಪ್ರದೇಶಗಳಲ್ಲಿ ಸ್ವಂತ ವಸತಿ ಖರ್ಚು ಬರಿಸಿಕೊಂಡು ವಿದ್ಯಾಭ್ಯಾಸ ಮಾಡುವುದು ಕಷ್ಟ. ನಾನು ಹಾಸ್ಟೆಲ್ ಪ್ರವೇಶ ಸಿಗದ ಮಕ್ಕಳಿಗಾಗಿ ವಿದ್ಯಾಸಿರಿ ಯೋಜನೆ ರೂಪಿಸಿ ಮಾಸಿಕ ₹1500 ನೀಡಲಾಗುತ್ತಿದೆ. ಈಗ ಅದು ಸಾಲುವುದಿಲ್ಲ. ಹಾಗಾಗಿ ₹2000ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.