ಅಂಕಗಳ ಜೊತೆಗೆ ಜೀವನ ಪಾಠವನ್ನೂ ಕಲಿಯಬೇಕಾದ ಅಗತ್ಯವಿದೆ: ಮೋಹನ ಪಡಿವಾಳ

ನನ್ನ ವಿದ್ಯಾರ್ಥಿ ದೆಸೆಯನ್ನು ಇದೇ ಕಾಲೇಜಿನಲ್ಲಿಯೇ ಕಳೆದಿದ್ದೇನೆ.ನಾಯಕತ್ವವನ್ನು ಬೆಳೆಸಿಕೊಳ್ಳುವಾಗ ನಮ್ಮ ಹಿಂದೆ ಇತರರೂ ಬೆಳೆಯಬೇಕು ಅನ್ನುವ ಗುಣ ಇರಬೇಕು.ಸಂಸ್ಥೆಯನ್ನು ಯಾವತ್ತೂ ಯಾವ ವಿದ್ಯಾರ್ಥಿಯೂ ಮರೆಯಬಾರದು.ಕಾಲೇಜಿನ ಅಭಿವೃದ್ಧಿ ಕೆಲಸಗಳಿಗೆ ನಿಮ್ಮಿಂದಾದ
ಕೊಡುಗೆ ಕೊಡಬೇಕು.ಅಂಕಗಳೊಂದಿಗೆ ಜೀವನ ಪಾಠವನ್ನೂ ಕಲಿಯಬೇಕಿದೆ.ಅವಕಾಶ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು.
ನನಗೆ ವಿದ್ಯಾರ್ಥಿಗಳ ಜೊತೆಗೆ ಸೇರುವುದೇ ಒಂದು ಸಂತೋಷವಾಗಿದೆ ಎಂದು ಭುವನೇಂದ್ರಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಮೋಹನ ಪಡಿವಾಳ ಇವರು ಹೇಳಿದರು.ಅವರು,ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿಎ ಶಿವಾನಂದ ಪೈ ಯವರು ಮಾತನಾಡುತ್ತಾ, ಆಯ್ಕೆಯಾದ ವಿದ್ಯಾರ್ಥಿಗಳು ಅವರ ಜವಾಬ್ದಾರಿಯನ್ನು ಅರಿತು ಮುಂದುವರಿಯಬೇಕು.ಇದೊಂದು ನಿಮ್ಮ ಬದುಕಿಗೆ ಒದಗಿದ
ಸುವರ್ಣಾವಕಾಶವೆಂದು ತಿಳಿಯಬೇಕು. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು. ನೀವು ಅವಕಾಶವನ್ನು ಕೊಡುವಾಗ ಎಲ್ಲರಿಗೂ ಹಂಚಿ ಕೊಡುವ ಮನೋಭಾವವನ್ನು ಹೊಂದಿದ್ದರೆ, ಬದುಕಿನಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ.
ನಿಮ್ಮಲ್ಲಿರುವ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಿ. ಒಬ್ಬ ವಿದ್ಯಾರ್ಥಿ ಯ ಭವಿಷ್ಯ ಕೇವಲ ಪುಸ್ತಕದಿಂದ ಮಾತ್ರ ರೂಪುಗೊಳ್ಳುವುದಿಲ್ಲ ಎಂದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ ಈಶ್ವರ ಭಟ್ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.
ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಎರ್ಮಾಳ್ ಮೋಹನ ಶೆಣೈ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ರಮೇಶ್ ಎಸ್.ಸಿ., ವಿದ್ಯಾರ್ಥಿ ಸಂಘದ ಸಂಯೋಜಕರಾದ ಪ್ರೊ ನಂದಕಿಶೋರ್ ಕೆ. ಹಾಗೂ ಆಯ್ಕೆಯಾದ ಎಲ್ಲ ವಿದ್ಯಾರ್ಥಿ ಪ್ರತಿನಿಧಿಗಳು
ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಮಂಜುನಾಥ ಎ.ಕೋಟ್ಯಾನ್ ಸ್ವಾಗತಿಸಿ, ಅಂತಿಮ ಬಿಕಾಂ.ನ ಅನನ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ರಮೇಶ್ ಎಸ್.ಸಿ.ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಉದ್ಘಾಟನೆಯ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.








