26 C
Udupi
Sunday, April 12, 2026
spot_img
spot_img
HomeBlog"ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು"ಇಕ್ಬಾಲ್ ಅಹಮದ್

“ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು”ಇಕ್ಬಾಲ್ ಅಹಮದ್

ವಿದ್ಯಾರ್ಥಿ ದೆಸೆಯಲ್ಲಿಯೇ ಮಕ್ಕಳು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಶಿಸ್ತು, ಸಂಯಮ,ನಾಯಕತ್ವ ಇವೆಲ್ಲವೂ ಮುಂದಿನ ಜೀವನಕ್ಕೆ ಆಧಾರವಾಗಿ ಉತ್ತಮ ಮನುಷ್ಯನನ್ನು ರೂಪಿಸುತ್ತದೆ ಎಂದು ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಇಕ್ಬಾಲ್ ಅಹಮದ್ ಹೇಳಿದರು.

ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ 2024-25 ಸಾಲಿನ ಇಂಟರ್ಯಾಕ್ಟ್ ಕ್ಲಬ್ಬಿನ ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪದ ಪ್ರಧಾನ ಮಾಡಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಶಾಲಾ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ರಾದ ಗುಣಪಾಲ ಕಡಂಬ, ಪ್ರಾಂಶುಪಾಲ ಬೇಬಿ ಈಶ್ವರಮಂಗಲ, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಗಣೇಶ ಸಾಲಿಯಾನ್ ಇಂಟರ್ಯಾ ಕ್ಟ್ ಕ್ಲಬ್ಬಿನ 2023-24ನೇ ಸಾಲಿನ ಅಧ್ಯಕ್ಷೆ ಸಾಕ್ಷಿ, ನೂತನ ಕಾರ್ಯದರ್ಶಿ ನವ್ಯಾ ಉಪಸ್ಥಿತರಿದ್ದರು.2023-24ನೇ ಸಾಲಿನ ಕಾರ್ಯದರ್ಶಿ ಸುವೀಕ್ಷಾ ವಾರ್ಷಿಕ ವರದಿಯನ್ನು ವಾಚಿಸಿದರು,2024-25 ನೇ ಸಾಲಿನ ಅಧ್ಯಕ್ಷೆ ಸಮೀಕ್ಷಾ ಕ್ಲಬ್ಬಿನ ಮುಂದಿನ ವರ್ಷದ ಯೋಜನೆಗಳ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ನರಸಿಂಹ ನಾಯಕ್ ಸ್ವಾಗತಿಸಿದರು. ಇಂಟರ್ಯಾಕ್ಟ್ ಸಭಾಪತಿ ಜ್ಯೋತಿ ಪದ್ಮನಾಭ ಕ್ಲಬ್ಬಿನ ದ್ಯೇಯೋದ್ದೇಶ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರ್ಗದರ್ಶಿ ಶಿಕ್ಷಕ ನಾರಾಯಣ ಪೂಜಾರಿ ನಿರೂಪಿಸಿದರು.ಶಿಕ್ಷಕ ಸತೀಶ್ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page