ವಿಶ್ವ ಯೋಗ ದಿನಾಚರಣೆ ಹಾಗೂ ಶನಿವಾರ ಸಂಭ್ರಮ ಕಾರ್ಯಕ್ರಮ

ವಿಜೇತ ವಿಶೇಷ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಯ್ಯಪ್ಪನಗರ ಸಹಯೋಗದಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ಶನಿವಾರ ಸಂಭ್ರಮ ಕಾರ್ಯಕ್ರಮ ಇಂದು ವಿಜೇತ ವಿಶೇಷ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಅಯ್ಯಪ್ಪನಗರ ಮುಖ್ಯೋಪಾಧ್ಯಾಯನಿ ರೇವತಿ, ಶಿಕ್ಷಕರಾದ ಮಂಜೇಗೌಡ,ಶ್ರೀಮತಿ, ಲತಾ,ಜಯಶ್ರೀ, ಸಾಧನ ಶೆಣೈ ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಶ್ರೀನಿಧಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕಿ ಸುಮನಾ ವಂದಿಸಿದರು.







