ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕ ವಿಶೇಷ ಶಿಬಿರ, ಸಮಾರೋಪ ಸಮಾರಂಭ

ರಾಷ್ಟ್ರೀಯ ಸೇವಾ ಯೋಜನೆ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕ ವಿಶೇಷ ಶಿಬಿರ 2025-26 ರ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಮುನಿಯಾಲು ಶ್ರೀ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಸಮಾರೋಪ ಭಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರೊಫೆಸರ್ ಭಾಗ್ಯಲಕ್ಷ್ಮೀ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆರೂರ್ ಕ್ಲಿನಿಕ್ ನ ವೈದ್ಯಾಧಿಕಾರಿಗಳಾದ ಡಾ.ವೆಂಕಟಗಿರಿ, ಕಾರ್ಕಳ ಮೆಸ್ಕಾಂ ಅಕೌಂಟ್ಸ್ ಆಫಿಸರ್ ಗಿರೀಶ್ ರಾವ್,ಕಾಲೇಜು ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷರಾದ ರಾಜಾರಾಮ್ ನಾಯಕ್, ವಿಜೇತ ವಿಶೇಷ ಶಾಲಾ ಸ್ಥಾಪಕರಾದ ಡಾ. ಕಾಂತಿ ಹರೀಶ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಹರೀಶ್, ಎನ್ ಎಸ್ ಎಸ್ ಕಾರ್ಡಿನೇಟರ್ ಪ್ರೊಫೆಸರ್ ಚಂದ್ರಕಾಂತ್ ಶೆಣೈ,ರೇಣುಕಾ ಎಚ್ ಜಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಪುಟ್ಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ ವಿಜೇತ ವಿಶೇಷ ಶಾಲಾ ವಿದ್ಯಾರ್ಥಿಗಳಾದ ಕಿಶೋರ್ ಹಾಗೂ ಅಥ್ಲೇಟಿಕ್ಸ್ ನಲ್ಲಿ ಭಾಗವಹಿಸಿದ ನಿಶಿತಾ ಇವರನ್ನು ಗೌರವಿಸಲಾಯಿತು.
ಎನ್ ಎಸ್ ಎಸ್ ಶಿಬಿರಾರ್ಥಿ ಗಳೊಂದಿಗೆ ಶಿಬಿರದ ಕಾರ್ಯದರ್ಶಿ ಸೃಜನ್, ನವನೀತ್, ಚಿರಾಗ್, ಶರವಣ್, ಅನನ್ಯ, ಪೂರ್ಣ, ಅಕ್ಷತಾ, ಪ್ರೇಕ್ಷ, ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅನನ್ಯ ಕಾರ್ಯಕ್ರಮ ನಿರೂಪಿಸಿ, ಪೂರ್ಣ ಸ್ವಾಗತಿಸಿ, ಅಕ್ಷತಾ ವಂದಿಸಿದರು.





