ಮಂಜುನಾಥ್ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ, ವಾರ್ಷಿಕ ವಿಶೇಷ ಶಿಬಿರ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ

ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಬಂಟರ ಸಂಘ ಕಾರ್ಕಳ ಇದರ ಅಧ್ಯಕ್ಷರು ಶ್ರೀಮತಿ ಪೂರ್ಣಿಮಾ ಹೆಗ್ಡೆ ಇವರು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಕ್ಕುಂದೂರು ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರು ರಾಜೇಶ್ ರಾವ್ ಪರಪ್ಪು ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಮುಖ್ಯ ಅತಿಥಿಗಳಾಗಿ ಕಲಾವಿದರು ತೆಲಿಕೆದ ತೆನಾಲಿ ಕಾರ್ಕಳ ಶ್ರೀ *ಸುನಿಲ್ ನೆಲ್ಲಿಗುಡ್ಡೆ, ಉದ್ಯಮಿಗಳು ಶ್ರೀ ಸುರೇಶ್ ಕುಮಾರ್* , ವಿಜೇತ ವಿಶೇಷ ಶಾಲಾ ಸ್ಥಾಪಕರಾದ ಡಾ. ಕಾಂತಿ ಹರೀಶ್, ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಅಕ್ಷತಾ ರಾವ್, ಎನ್ ಎಸ್ ಎಸ್ ಕಾರ್ಡಿನೇಟರ್ ಪ್ರೊಫೆಸರ್ ಚಂದ್ರಕಾಂತ್ ಶೆಣೈ, ಪ್ರೊಫೆಸರ್ ರೇಣುಕಾ ಎಚ್. ಜಿ ಉಪಸ್ಥಿತರಿದ್ದರು.
ಎನ್ ಎಸ್ ಎಸ್ ವಿದ್ಯಾರ್ಥಿಗಳಾದ ಪಲ್ಲವಿ ಕಾರ್ಯಕ್ರಮ ನಿರೂಪಿಸಿ, ಶಾರ್ವನಿ ಸ್ವಾಗತಿಸಿ, ಸುಚಿತ್ರಾ ವಂದಿಸಿದರು.




