ಸೈ೦ಟ್ ಮಿಲಾಗ್ರಿಸ್ ಕ್ರೆಡಿಟ್ ಕೋ – ಆಪರೇಟಿವ್ ಸಂಸ್ಥೆ ಸಮಾಜಕ್ಕೆ ಮಾದರಿ -“ಉದಯ ಶೆಟ್ಟಿ ಮುನಿಯಾಲು

ಕಾರ್ಕಳ – ವಿಜೇತ ವಸತಿಯುತ ವಿಶೇಷ ಶಾಲೆ ,ಅನಾಥ ಹಾಗೂ ವಿಶೇಷ ಚೇತನ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ,ಇಂತಹ ವಿದ್ಯಾ ಸಂಸ್ಥೆಗೆ ,ಸಂಸ್ಥೆಯ ಅಭಿವೃದ್ಧಿಗೆ ಸಹಾಯದ ಅಗತ್ಯವಿದ್ದು ,ಅದನ್ನು ಮನಗೊಂಡ ಸೈ೦ಟ್ ಮಿಲಾಗ್ರಿಸ್ ಕ್ರೆಡಿಟ್ ಕೋ- ಆಪರೇಟಿವ್ ಸಂಸ್ಥೆ,ಈ ನಿಟ್ಟಿನಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಬೇಕಾದ ಮೂಲ ಪರಿಕರಗಳನ್ನು ಒದಗಿಸುವ ಮೂಲಕ ಸ್ವಾತಂತ್ರೋತ್ಸವಕ್ಕೆ ನೈಜ ಅರ್ಥ ಒದಗಿಸಿಕೊಟ್ಟಿದೆ ಹಾಗೂ ಸಂಸ್ಥೆಯ ಶುಭ ಕಾರ್ಯಕ್ಕೆ ವಿದ್ಯಾ ದೇಗುಲ ಸದಾ ಆಭಾರಿಯಾಗಿರುತ್ತದೆ ಎಂದು ವಿದ್ಯಾ ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಡಾ. ಕಾಂತಿ ಹರೀಶ್ ವಿವರಿಸಿದರು
ಸುಮಾರು ವರ್ಷಗಳಿಂದ ಬ್ಯಾಂಕ್ ತನ್ನ ಉತ್ತಮ ಸೇವೆಯೊಂದಿಗೆ ಇಂತಹ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಿರುವುದು ನಮ್ಮೆಲರಿಗೂ ಹೆಮ್ಮೆಯ ವಿಷಯ ,ಈ ವರ್ಷ ಇಂತಹ ಹಲವಾರು ವಿದ್ಯಾಸಂಸ್ಥೆಗೆ ಸೈ೦ಟ್ ಮಿಲಾಗ್ರಿಸ್ ಸಂಸ್ಥೆ ಪೂರಾ ಸಹಕಾರ ನೀಡಿದೆ ,ದೇವರು ಮುಂದೆಯೂ ಇಂತಹ ಕಾರ್ಯಕ್ಕೆ ಮನಸ್ಸು ಮಾಡುವಲ್ಲಿ ಅನುಗ್ರಹಿಸಲಿ ಎಂದು ಉದ್ಯಮಿ ಉದಯ ಶೆಟ್ಟಿ ಮುನಿಯಾಲು ಅವರು ಸ್ವತಂತ್ರ ದಿನಕ್ಕೆ ಶುಭ ಹಾರೈಕೆಗಳನ್ನು ಹಾರೈಸಿದರು.

ಪ್ರಧ್ಯಾಪಕರಾದ ಗಣೇಶ್ ಜಾಲ್ಸೋರ್ ಮಾತನಾಡುತ್ತಾ ಇದಕೆಲ್ಲಾ ಮೂಲ ಕಾರಣ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಜಾರ್ಜ್ ಫೆರ್ನಾಂಡಿಸ್ ರವರು ,ಅವರ ಸಹಕಾರವಿಲ್ಲದೆ ಸಂಸ್ಥೆ ಇಂತಹ ತೀರ್ಮಾನ ಕೈಗೊಳ್ಳುಲು ಅಸಾಧ್ಯ , ಇಂತಹ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನಮೆಲ್ಲರಿಗೂ ಸಂತಸದ ವಿಚಾರ ಎಂದರು.
ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನ ವಿದ್ಯಾಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ,ಅಗತ್ಯವಿದ್ದ ಬೆಡ್ ಶೀಟ್, ಬಿಸ್ಕ್ ತ್ ,ಜ್ಯೂಸ್ ಇತ್ಯಾದಿ, ಸಿಹಿ ಹಂಚಿ ,ಶುಭ ಹಾರೈಸಲಾಯಿತ್ತು ,ಸಂಸ್ಥೆಯು 79 ನೇ ವರ್ಷದ ಸ್ವಾತಂತ್ರೋಸ್ತ್ವ ವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರರ್ಮಕ್ಕೆ ಮುಖ್ಯ ಅತಿಥಿಯಾಗಿ ಉದ್ಯಮಿ , ಬಂಟ್ಸ್ ಕೋ -ಆಪರೇಟಿವ್ ಸೊಸೈಟಿ ಅಧ್ಯಕ್ಷರು ಮತ್ತು ರಾಜಕೀಯ ಮುಖಂಡರು ಉದಯ ಶೆಟ್ಟಿ ಮುನಿಯಾಲು ,ಭುವನೇಂದ್ರ ಹೈಸ್ಕೂಲ್ ಪ್ರಾಧ್ಯಾಪಕರು ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಸ್ಕೌಟ್ & ಗೈಡ್ಸ್ ಕಾರ್ಕಳ ವಲಯ ಶ್ರೀ ಗಣೇಶ್ ಜಲ್ಸೂರು (ಪ್ರಧ್ಯಾಪಕರು) , ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕಿಶೋರ್ ದೇವಾಡಿಗ ,ಸಂಸ್ಥೆಯ ಉಡುಪಿ – ಮಂಗಳೂರು ವಿಭಾಗದ ಡೆವಲಪ್ಮೆಂಟ್ ಮ್ಯಾನೇಜರ್ ಮನೀಶ್ , ಸಂಸ್ಥೆಯ ಉಡುಪಿ – ಮಂಗಳೂರು ವಿಭಾಗದ ಸಾಲ ವಸೂಲಾತಿ ಅಧಿಕಾರಿ ಗೌತಮ್ ರೈ
ಮತ್ತು ವಿಜೇತ ವಿಶೇಷ ಶಾಲಾ ಸಂಸ್ಥಾಪಕರಾದ ಡಾ.ಕಾಂತಿ ಹರೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ ಡಾ.ಕಾಂತಿ ಹರೀಶ್ ಸ್ವಾಗತಿಸಿ, ಸಿಬ್ಬಂದಿ ವರ್ಗದವರು ಹಾಗೂ ಮಕ್ಕಳು ಪ್ರಾರ್ಥನೆಯನ್ನು ನೆರವೇರಿಸಿ, ಶಿಕ್ಷಕಿ ಶ್ವೇತಾ ವಂದಿಸಿದರು.