
ಇದೀಗ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ತೀರ್ಪುಂದನ್ನು ಪ್ರಕಟಿಸಿದ್ದು ಅದೇನೆಂದರೆ, ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ವಿವಾಹದ ಸಮಯದಲ್ಲಿ ತನ್ನ ತಂದೆಯಿಂದ ಪಡೆದ ನಗದು ಮತ್ತು ಚಿನ್ನದ ಆಭರಣಗಳನ್ನು ಮರುಪಡೆಯಲು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಅರ್ಹತೆ ಇದೆ ಎಂದು ಆದೇಶ ಹೊರಡಿಸಿದೆ.
ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆಯ ವ್ಯಾಪ್ತಿ ವಿಶಾಲವಾಗಿದ್ದು ಇದು ವಿಚ್ಛೇದನದ ನಂತರ ಮುಸ್ಲಿಂ ಮಹಿಳೆಯ ಘನತೆ ಮತ್ತು ಆರ್ಥಿಕ ರಕ್ಷಣೆಯನ್ನು ಭದ್ರಪಡಿಸುವ ಬಗ್ಗೆ ಕಾಳಜಿ ವಹಿಸುತ್ತದೆ, ಇದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಮಹಿಳೆಯರ ಹಕ್ಕುಗಳಿಗೆ ಹೊಂದಿಕೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಆಗಸ್ಟ್ 28, 2005 ರಂದು ದಂಪತಿ ವಿವಾಹವಾಗಿದ್ದು ಡಿಸೆಂಬರ್ 13, 2011 ರಂದು ವಿಚ್ಛೇದನ ಪಡೆದಿದ್ದರು. ನಂತರ, ಬೇಗಂ ವರದಕ್ಷಿಣೆ ಮೊತ್ತ, ಚಿನ್ನಾಭರಣಗಳು ಮತ್ತು ಇತರ ಸರಕುಗಳನ್ನು ಒಳಗೊಂಡ 17,67,980 ರೂ.ಗಳನ್ನು ಹಿಂದಿರುಗಿಸುವಂತೆ ಕೋರಿ ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಸೆಕ್ಷನ್ 3 ರ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದರು. ಈ ಕೇಸ್ ಬಳಿಕ ಕಲ್ಕತ್ತಾ ಹೈಕೋರ್ಟ್‌ಗೆ ತಲುಪಿತು. ಆದರೆ ಹೈಕೋರ್ಟ್ ಮಹಿಳೆಯ ವಿರುದ್ಧ ತೀರ್ಪು ನೀಡಿತು. ಇದರ ವಿರುದ್ಧ ಬೇಗಂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು ಇದೀಗ ವಾದ-ಪ್ರತಿವಾದ ಆಲಿಸಿದ ಬಳಿಕ ಸುಪ್ರೀಂಕೋರ್ಟ್ ಮಹಿಳೆಯ ಪರ ತೀರ್ಪು ನೀಡಿದೆ. ಜೊತೆಗೆ, ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ವಿವಾಹದ ಸಮಯದಲ್ಲಿ ತನ್ನ ತಂದೆಯಿಂದ ಪಡೆದ ನಗದು ಮತ್ತು ಚಿನ್ನದ ಆಭರಣಗಳನ್ನು ಮರುಪಡೆಯಲು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಅರ್ಹತೆ ಇದೆ ಎಂದು ತಿಳಿಸಿದೆ.



















