
ನವದೆಹಲಿ: ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಅದೇನೆಂದರೆ ವಾಣಿಜ್ಯ ಬಳಕೆಯ 19 ಕೆ.ಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 41 ರೂ. ಇಳಿಕೆಯಾಗಿದೆ.
ತೈಲ ಕಂಪನಿಗಳು 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 41 ರೂ. ಇಳಿಸಿದ್ದು ಹೊಸ ಬೆಲೆ ಏ.2 ಅಂದರೆ ನಾಳೆಯಿಂದ ಜಾರಿಯಾಗಲಿದೆ. ಹೊಸ ಬೆಲೆಯಿಂದಾಗಿ ರೆಸ್ಟೋರೆಂಟ್, ಹೋಟೆಲ್ ಮತ್ತು ವಾಣಿಜ್ಯ ಘಟಕಗಳಿಗೆ ಪ್ರಯೋಜನವಾಗಲಿದ್ದು, ಆದರೆ ದಿನಬಳಕೆಯ ಸಿಲಿಂಡರ್‌ನ ಬೆಲೆ ಬದಲಾಗದೆ ಉಳಿದಿರುವುದು ಬೇಸರ ತಂದಿದೆ.
ದರ ಇಳಿಕೆಯ ಬಳಿಕ, ದೆಹಲಿಯಲ್ಲಿ 1,803 ರೂ. ಇದ್ದ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯು 1,762 ರೂ.ಗೆ ಇಳಿದಿದೆ. ಬೆಂಗಳೂರಿನಲ್ಲಿ 1,836 ರೂ., ಮುಂಬೈನಲ್ಲಿ 1,714 ರೂ., ಕೋಲ್ಕತ್ತಾದಲ್ಲಿ 1,872 ರೂ., ಚೆನ್ನೈನಲ್ಲಿ 1,924 ರೂ.ಗೆ ಇಳಿಕೆಯಾಗಿದೆ.




