28.7 C
Udupi
Wednesday, March 4, 2026
spot_img
spot_img
HomeBlogವಾಣಿಜ್ಯೋದ್ಯಮ ಉದ್ಯೋಗ ಶೀಲತಾ ಜಾಗೃತಿ ಕಾರ್ಯಕ್ರಮ

ವಾಣಿಜ್ಯೋದ್ಯಮ ಉದ್ಯೋಗ ಶೀಲತಾ ಜಾಗೃತಿ ಕಾರ್ಯಕ್ರಮ

ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ

ವಾಣಿಜ್ಯೋದ್ಯಮ ಉದ್ಯೋಗಶೀಲತಾ ಜಾಗೃತಿ ಕಾರ್ಯಕ್ರಮ
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಹಾಗೂ ಹೆಚ್ ಆರ್ ಡಿ ಮತ್ತು ಪ್ಲೇಸ್ಮೆಂಟ್ ಸೆಲ್ ಇದರ ಆಶ್ರಯದಲ್ಲಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಇದರ ಸಹಯೋಗದೊಂದಿಗೆ ವಾಣಿಜ್ಯೋದ್ಯಮ ಉದ್ಯೋಗಶೀಲತಾ ಜಾಗೃತಿ ಉದ್ಘಾಟನಾ ಕಾರ್ಯಕ್ರಮದ ಕಾರ್ಯಾಗಾರವು ನೆರವೇರಿತು.


ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಟಿ. ಎ. ಜಗದೀಶ್ ಅವರು ಉದ್ಘಾಟನೆಯನ್ನು ನೆರವೇರಿಸಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ
ಉದ್ಯಮವನ್ನು ಸ್ಥಾಪಿಸುವುದಾದರೆ, ಅದಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನವನನ್ನು ಈಗಿಂದಲೇ
ಮಾಡಿಕೊಳ್ಳಬೇಕು. ಸತತ ಪ್ರಯತ್ನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ಎದುರಿಸುವ ಆತ್ಮಸ್ಥೈರ್ಯವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ,ಶ್ರೀ ರವಿಶಂಕರ್ ಶೇರಿಗಾರ್ ಮಾತನಾಡುತ್ತಾ, ವಾಣಿಜ್ಯೋದ್ಯಮದ ಎಲ್ಲ ಅವಕಾಶಗಳನ್ನು
ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು.ಇಂತಹ ಕಾರ್ಯಕ್ರಮಗಳು ನಿಮಗೆ ಆ ದಿಸೆಯಲ್ಲಿ ಸಹಾಯಕವಾಗಲಿವೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಎಂ. ಎಸ್. ಎಂ. ಇ. ಡಿ. ಎಫ್. ಒ. ಇದರ ಅಸಿಸ್ಟೆಂಟ್ ಡೈರೆಕ್ಟರ್ ಆಗಿರುವ ಸುಂದರ್ ಎಸ್. ಮಾಳ
ಮಾತನಾಡಿ,ಎಲ್ಲ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಮತ್ತು ಸಾಮಾರ್ಥ್ಯ ಇರುತ್ತದೆ. ಆದರೆ ನಮಗೆ ಆತ್ಮವಿಶ್ವಾಸದ ಕೊರತೆ
ಇರುವುದರಿಂದ ಸಾಧಿಸುವುದಕ್ಕೆ ಹಿಂಜರಿಯುತ್ತೇವೆ. ಇದು ಸಲ್ಲದು. ನಿಮಗೆ ಅವಕಾಶಗಳನ್ನು ಕಲ್ಪಿಸುವ ಸಲುವಾಗಿ ಈ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ. ಅದನ್ನು ಬಳಸಿಕೊಳ್ಳಬೇಕು. ವಾಣಿಜ್ಯೋದ್ಯಮ ಬೆಳೆದಿರುವ ರೀತಿಯನ್ನು ವಿದ್ಯಾರ್ಥಿಗಳು ಈಗಲೇ
ಗಮನಿಸುತ್ತಿರಬೇಕು.ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಅವರು, ಮಾತನಾಡಿ, ಇಂದಿನ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಕೆಲಸವನ್ನು ಆಶ್ರಯಿಸಲೇಬೇಕು. ನಿರುದ್ಯೋಗವನ್ನು ಹೋಗಲಾಡಿಸಲು ಸ್ವ
ಉದ್ಯೋಗವನ್ನೂ ಬಳಸಿಕೊಳ್ಳಬಹುದು. ಉದ್ದಿಮೆ ಅಷ್ಟು ಸುಲಭಸಾಧ್ಯವಲ್ಲವಾದರೂ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮಗಳಿಂದ
ಸಣ್ಣ ಉದ್ದಿಮೆಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಅಂಗವೖಕಲ್ಯವೂ ನಮ್ಮ ಸಾಧನೆಗೆ ಅಡ್ಡಿಯಾಗಲಾರದು. ಸೋತರೂ ಕುಗ್ಗದಿರುವ
ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಅಂತಹ ಅನೇಕ ಸಾಧಕರ ಚರಿತ್ರೆಗಳು ನಮಗೆ ಆದರ್ಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪ್ರಜ್ಞಾ ನಾರಾವಿ ಇವರು ವಿದ್ಯಾರ್ಥಿಗಳಿಗೆ ವಾಣಿಜ್ಯೋದ್ಯಮದ ಕುರಿತು ಕಾರ್ಯಾಗಾರವನ್ನು
ನಡೆಸಿಕೊಟ್ಟರು.
ವೇದಿಕೆಯಲ್ಲಿ ಸಹ ಸಂಯೋಜಕಿ, ಶ್ರೀಮತಿ ಜಾಯ್ಲಿನ್ ವಿ. ಕಬ್ರಾಲ್ ಅವರು ಉಪಸ್ಥಿತರಿದ್ದರು.
  ಹೆಚ್. ಆರ್. ಡಿ. ಮತ್ತು ಪ್ಲೇಸ್ಮೆಂಟ್ ಸೆಲ್ ನ ಸಂಯೋಜಕರಾದ ಶ್ರೀ ಮಹೇಶ್ ಶೆಟ್ಟಿ ಸ್ವಾಗತಿಸಿದರು.
ತೃತೀಯ ಬಿ. ಕಾಂ ವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು. ಪೂರ್ವಿ ಧನ್ಯವಾದ ಸಮರ್ಪಿಸಿದರು. ಹಿತ ಪ್ರಾರ್ಥಿಸಿದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page