25.6 C
Udupi
Tuesday, February 3, 2026
spot_img
spot_img
HomeBlogವರ್ಷಕ್ಕೆ 12 ದಿನಗಳ ವೇತನ ಸಹಿತ ಋತುಚಕ್ರದ ರಜೆ: ಷರತ್ತುಗಳೊಂದಿಗೆ ಆದೇಶ ಹೊರಡಿಸಿದ ಸರ್ಕಾರ

ವರ್ಷಕ್ಕೆ 12 ದಿನಗಳ ವೇತನ ಸಹಿತ ಋತುಚಕ್ರದ ರಜೆ: ಷರತ್ತುಗಳೊಂದಿಗೆ ಆದೇಶ ಹೊರಡಿಸಿದ ಸರ್ಕಾರ

ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯು ತನ್ನ ಎಲ್ಲಾ ಮಹಿಳಾ ನೌಕರರಿಗೆ ಅಧಿಕೃತವಾಗಿ ‘ಋತುಚಕ್ರದ ರಜೆ’ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಈ ಕುರಿತು ಭಾ.ಆ.ಸೇ. ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಅವರು ಜನವರಿ 28ರಂದು ಅಧಿಸೂಚನೆ ಹೊರಡಿಸಿದ್ದಾರೆ. ಸರ್ಕಾರದ 12-11-2025ರ ಆದೇಶದಂತೆ ತಿಂಗಳಿಗೆ ಒಂದು ದಿನದಂತೆ ವರ್ಷಕ್ಕೆ ಒಟ್ಟು 12 ದಿನಗಳ ವೇತನ ಸಹಿತ ರಜೆ ನೀಡುವ ಮಹತ್ವದ ನಿರ್ಧಾರವನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಲಾಗಿದೆ.

ಈ ಋತುಚಕ್ರದ ರಜೆಯನ್ನು ಪಡೆಯಲು ಮಹಿಳಾ ನೌಕರರು ಕಡ್ಡಾಯವಾಗಿ ಪಾಲಿಸಬೇಕಾದ ಆರು ಷರತ್ತುಗಳನ್ನು ಸರ್ಕಾರ ನಿಗದಿಪಡಿಸಿದೆ.

  • ಮೊದಲನೆಯದಾಗಿ, ಈ ರಜೆ ‘ನೋ ಕ್ಯಾರಿ ಓವರ್’ ನಿಯಮಕ್ಕೆ ಒಳಪಟ್ಟಿದ್ದು, ಒಂದು ತಿಂಗಳಲ್ಲಿ ಬಳಸದ ರಜೆಯನ್ನು ಮುಂದಿನ ತಿಂಗಳಿಗೆ ಸಾಗಿಸಲು ಅವಕಾಶ ಇರುವುದಿಲ್ಲ.
  • ಪ್ರತಿ ತಿಂಗಳ ಒಂದು ದಿನದ ರಜೆಗೆ ಯಾವುದೇ ವೈದ್ಯಕೀಯ ಪ್ರಮಾಣಪತ್ರ ಅಥವಾ ಇತರೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವೂ ಇರುವುದಿಲ್ಲ.
  • 18ರಿಂದ 52 ವರ್ಷದೊಳಗಿನ ಋತುಚಕ್ರ ಹೊಂದಿರುವ ಮಹಿಳಾ ಸರ್ಕಾರಿ ನೌಕರರು ಈ ಮಾಸಿಕ ರಜೆಗೆ ಅರ್ಹರಾಗಿರುತ್ತಾರೆ.
  • ಸಾಂದರ್ಭಿಕ ರಜೆ (CL) ಮಂಜೂರು ಮಾಡುವ ಸಕ್ಷಮ ಅಧಿಕಾರಿಯೇ ಈ ಋತುಚಕ್ರದ ರಜೆಯನ್ನು ಸಹ ಅನುಮೋದನೆ ನೀಡಲಿದ್ದಾರೆ.
  • ರಜೆ ಪಡೆಯುವ ಸಂದರ್ಭದಲ್ಲಿ ಮಹಿಳಾ ನೌಕರರು ರಜೆ ಅಥವಾ ಹಾಜರಾತಿ ಪುಸ್ತಕದಲ್ಲಿ ಇದನ್ನು ಪ್ರತ್ಯೇಕವಾಗಿ ದಾಖಲಿಸಬೇಕು.
  • ಇದೇ ವೇಳೆ, ಸರ್ಕಾರದ ಆದೇಶದಂತೆ ಋತುಚಕ್ರದ ರಜೆಯನ್ನು ಸಾಂದರ್ಭಿಕ ರಜೆ (CL), ಗಳಿಕೆ ರಜೆ (EL) ಸೇರಿದಂತೆ ಇತರ ಯಾವುದೇ ರಜೆಗಳೊಂದಿಗೆ ಸಂಯೋಜಿಸಲು ಅವಕಾಶ ಇರುವುದಿಲ್ಲ.

ಶಿಕ್ಷಣ ಇಲಾಖೆಯು ಮಹಿಳಾ ನೌಕರರ ಆರೋಗ್ಯ ಹಾಗೂ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಂಡಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page