
ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು, ಸ್ಕೌಟ್ಸ್, ಗೈಡ್ಸ್, ಕಬ್ಬ್ಸ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳಿಗೆ ವಿವಿಧ ಔಷಧೀಯ ಸಸ್ಯಗಳ ಪ್ರಕಾರಗಳು ಮತ್ತು ಅವುಗಳ ಮಹತ್ವ ಹಾಗೂ ಪರಿಸರ ಸಂರಕ್ಷಣೆಯ ಕುರಿತು ವಿಶೇಷ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಸ್ಕೌಟ್ ಮಾಸ್ಟರ್ ಮಮತಾ ಗಣೇಶ್ ದೇವಾಡಿಗ ಅವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಕೆ. ಹೆಗ್ಡೆ, ಕುಮಾರಯ್ಯ ಹೆಗ್ಡೆ, ಆಡಳಿತಾಧಿಕಾರಿ ಹಾಗೂ ಸ್ಕೌಟ್ ಮಾಸ್ಟರ್ ಕರ್ತವ್ಯ ಜೈನ್, ಗೈಡ್ ಕ್ಯಾಪ್ಟನ್ ಪ್ರಿಯಾ ನಾಯಕ್, ಕಬ್ ಮಾಸ್ಟರ್ ಸ್ವಾತಿ ಶೆಟ್ಟಿ, ಫ್ಲಾಕ್ ಲೀಡರ್ ಸೌಮ್ಯಾ, ಬನ್ನಿ ಆಂಟಿ ಸ್ಮಿತಾ. ವಾಣಿ, ದೀಪಿಕಾ ಹಾಗೂ ದೈಹಿಕ ಶಿಕ್ಷಕರಾದ ಸಂದೇಶ್ ಹಾಗೂ ಬೋಧೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ, ಪ್ರಕೃತಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಿದ್ಯಾರ್ಥಿಗಳಿಗೆ ಭವಿಷ್ಯ ನಿರ್ಮಾಣದ ಪ್ರೇರಣೆಯನ್ನು ನೀಡಲಾಯಿತು.





