
ಶಿಕ್ಷಣದ ಜೊತೆ ಜೊತೆಗೆ ದೇಶ ಪ್ರೇಮ, ಕರ್ತವ್ಯ,ನಿಷ್ಠೆ, ಶಿಸ್ತು ಮೈಗೂಡಿಸಿಕೊಳ್ಳಿ: ಜಯ ಮೂಲ್ಯ, ನಿವೃತ್ತ ಸೇನಾ ಅಧಿಕಾರಿ
ವರ್ಧಮಾನ ಶಿಕ್ಷಣ ಸಂಸ್ಥೆ ಕಾರ್ಕಳ ಇಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರಯೋಧರ ಸ್ಮರಣಾರ್ಥವಾಗಿ ಅತ್ಯಂತ ಗೌರವದೊಂದಿಗೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾ ಅಧಿಕಾರಿ ಜಯ ಮೂಲ್ಯ ರವರು ಭಾಗವಹಿಸಿದ್ದರು. ಮೌನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಬಲಿದಾನ ಗೈದ ವೀರಯೋಧರಿಗೆ ಗೌರವದಿಂದ ಪುಷ್ಪ ನಮನ ಅರ್ಪಿಸಲಾಯಿತು.ಕಷ್ಟ ಮತ್ತು ಸುಖ ನಾಣ್ಯದ ಎರಡು ಮುಖಗಳಿದ್ದಂತೆ. ಶಿಸ್ತು, ಕರ್ತವ್ಯ ನಿಷ್ಠೆ ಹಾಗೂ ದೇಶಪ್ರೇಮ ನಿಮ್ಮಲ್ಲಿ ಮೈಗೂಡಿಸಿಕೊಂಡಲ್ಲಿ ಯಶಸ್ಸು ನಿಮ್ಮದಾಗುವುದು. ದೇಶದ ಉತ್ತಮ ಪ್ರಜೆಗಳಾಗಿ ಮೂಡಿಬನ್ನಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
1999 ಆಪರೇಷನ್ ವಿಜಯ ನಲ್ಲಿ ಭಾರತ ಮತ್ತು ಪಾಕಿಸ್ತಾನ ದ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ವಿಜಯ ತಂದು ಕೊಟ್ಟ ಹಲವಾರು ಯೋಧರಲ್ಲಿ ಓರ್ವರಾದ ನಿವೃತ್ತ ಸೇನಾನಿ ಶ್ರೀ ಜಯ ಮೂಲ್ಯ ರವರನ್ನು ದೇಶಸೇವೆಯ ದ್ಯೋತಕವಾಗಿ
ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ. ಕೆ. ಹೆಗ್ಡೆ ಆಡಳಿತ ಅಧಿಕಾರಿಯಾದ ಕರ್ತವ್ಯ ಜೈನ್, ರೋಟರಾಕ್ಟ್ ಕ್ಲಬ್ಬಿನ ಮಾಜಿ ಡಿ. ಆರ್. ಆರ್. ಚೇತನ್, ಕ್ಲಬ್ಬಿನ ಅಧ್ಯಕ್ಷರಾದ ಸಂದೇಶ್, ಕಾರ್ಯದರ್ಶಿ ಅನ್ವ ಯ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯದಾಗಿ ಮಕ್ಕಳೊಂದಿಗೆ ಮುಖ್ಯ ಅತಿಥಿಯವರ ಸಂವಾದ ಕಾರ್ಯಕ್ರಮ ನೆರವೇರಿತು.