“ಮಾತು ಕಲಿಸಿದ ಅಮ್ಮ, ಜೀವನ ಪಾಠ ಕಲಿಸಿದ ಅಪ್ಪ, ಯಶಸ್ಸಿನ ಮೊದಲ ಗುರುಗಳಿಗೆ ಸದಾ ಋಣಿಯಾಗಿರೋಣ”-ಜಗದೀಶ್ ಹೆಗ್ಡೆ ಕಾರ್ಕಳ.

ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಮತ್ತು ನಿವೃತ್ತಿ ಜೀವನದಲ್ಲಿಯೂ ಕೂಡ ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡುವ ಪ್ರಕಾಶ ಸ್ವರೂಪರಾದ ನಿವೃತ್ತ ಮುಖ್ಯೋಪಾಧ್ಯಾಯರು ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಹಾಗೂ ವರ್ಧಮಾನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿರುವ ಜಗದೀಶ್ ಹೆಗ್ಡೆ ಯವರಿಗೆ ಗುರುವಂದನೆಯನ್ನು ಸಲ್ಲಿಸಲಾಯಿತು.
ಜ್ಞಾನದ ಬೆಳಕನ್ನು ನಮ್ಮಲ್ಲಿ ಮೂಡಿಸಿ ಹೆಜ್ಜೆ ಹೆಜ್ಜೆಯಲ್ಲೂ ನಮ್ಮನ್ನು ತಿದ್ದುವ ಗುರುಗಳ ಪಾತ್ರ ಅನನ್ಯವಾದದ್ದು. ‘ಮುಂದೆ ಗುರಿ ಹಿಂದೆ ಗುರು’ಇದ್ದಲ್ಲಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಅಂತಹ ಗುರುಗಳಿಗೆ ಸದಾ ಋಣಿಯಾಗಿರೋಣ ಎಂದು ಜಗದೀಶ್ ಹೆಗ್ಡೆಯವರು ಮಕ್ಕಳಿಗೆ ತಿಳಿ ಹೇಳಿದರು.
ಪೋಷಕರು, ಶಿಕ್ಷಕರು, ಪ್ರಾಚಾರ್ಯರು ನಮ್ಮ ಜೀವನದ ಪ್ರಮುಖ ಭಾಗ ಎಂದು ಸಂಸ್ಥೆಯ ಅಧ್ಯಕ್ಷರಾದ ಶಶಿಕಲಾ. ಕೆ. ಹೆಗ್ಡೆಯವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಕುಮಾರಯ್ಯ ಹೆಗ್ಡೆ, ಆಡಳಿತಾಧಿಕಾರಿ ಕರ್ತವ್ಯ ಜೈನ್, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕರನ್ನು ಗೌರವಿಸಿ ಗುರುವಂದನೆ ಸಲ್ಲಿಸಿದರು.