
ದಿನಾಂಕ 23-10-2024 ರಂದು ಕಾರ್ಕಳ ತಹಶಿಲ್ದಾರ್ ಕಚೇರಿ ಯ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ, ಉಡುಪಿ ಜಿಲ್ಲೆ ವತಿಯಿಂದ ಕಾರ್ಕಳ ತಾಲ್ಲೂಕು ಮಟ್ಟದ ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಜನ ಸಂಪರ್ಕ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಮಂಜುನಾಥ್ DYSP ಕ.ಲೋ. ಇವರು ಸಾರ್ವಜನಿಕರ ದೂರು ಆಲಿಸಿದರು.
ತಹಶೀಲ್ದಾರ್ ಪ್ರತಿಭಾ ಆರ್ ರವರು ಕಾರ್ಯಕ್ರಮ ಸಮನ್ವಯಗೊಳಿಸಿದರು.
ರೂಪ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ ಇವರು ಭಾಗವಹಿಸಿದ್ದರು.
ಸದರಿ ಸಭೆಯಲ್ಲಿ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ
ಎಲ್ಲಾ ಅಧಿಕಾರಿಗಳು ಹಾಜರಿದ್ದು ಸ್ಥಳದಲ್ಲಿಯೇ ಹಲವು ದೂರುಗಳನ್ನು ಆಲಿಸಲಾಯಿತು.
ಈ ಸಾರ್ವಜನಿಕ ಅಹವಾಲು ಮತ್ತು ಜನ ಸಂಪರ್ಕ ಸಭೆ 19 ದೂರು ಅಹವಾಲು ಸ್ವೀಕರಿಸಲಾಯಿತು.
ಈ ದೂರುಗಳು ಪುರಸಭೆ, ಸರ್ವೆ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯತ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿಗಳಿಗೆ ಸಂಬಂಧಿಸಿದವುಗಳಾಗಿದ್ದವು.
ವೈಯಕ್ತಿಕ ದೂರುಗಳು…
- ಹದ್ದುಬಸ್ತ್ ಮಾಡಿಕೊಟ್ಟಿಲ್ಲ
- ಸರ್ವೆ ಮಾಡಿಕೊಟ್ಟಿಲ್ಲ
- ಜೈನ ದೇವಸ್ಥಾನಕ್ಕೂ ತಸ್ತೀಕ್ ಹಣ ಮಂಜೂರು ಮಾಡಿ (ಈಗ ಸದ್ಯಕ್ಕೆ ಹಿಂದೂ ದೇವಸ್ಥಾನಗಳಿಗೆ ಮಾತ್ರ ಬರ್ತಿದೆ)
- ಪಹಣಿ ಮಾಡಿಕೊಟ್ಟಿಲ್ಲ
- ಹಕ್ಕು ಪತ್ರ ಸಿಕ್ಕಿಲ್ಲ
ಸಾರ್ವಜನಿಕ ಹಿತಾಸಕ್ತಿಯ ದೂರುಗಳು
*ಏಕಬಳಕೆ ಪ್ಲಾಸ್ಟಿಕ್ ನಿಷೇದಿಸರೂ ಬಳಕೆ ಆಗ್ತಿದೆ
*ಕಸ ವಿಲೇವಾರಿ ಸುವ್ಯವಸ್ಥಿತವಾಗಿ ಆಗ್ತಿಲ್ಲ
*ಓಡಾಡಲು ರಸ್ತೆ ಇಲ್ಲ
*ಸರ್ಕಾರಿ ಕಚೇರಿಗಳಲ್ಲಿ ಶುಲ್ಕದ ವಿವರಗಳ ಬೋರ್ಡ್ ಹಾಕಿಲ್ಲ
ದೂರುಗಳನ್ನು ದಾಖಲಿಸಿಕೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಅವುಗಳನ್ನು ಕಳಿಸಿ ಶೀಘ್ರವಾಗಿ ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಂಜುನಾಥ್, DYSP ಲೋಕಾಯುಕ್ತ ಕುರಿತು ಮಾಹಿತಿ ನೀಡಿದರು.
ಸಾರ್ವಜನಿಕರ ಅರ್ಜಿಗಳನ್ನು ಅನಗತ್ಯ ವಿಳಂಬ ಮಾಡದೇ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಹಾಗೂ ಸೂಕ್ತ ಕಾರಣವಿಲ್ಲದೇ ತಿರಸ್ಕರಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಕಾರ್ಕಳ ತಾಲೂಕಿನಲ್ಲಿ ಉತ್ತಮ ಆಡಳಿತ ನಡೆಯುತ್ತಿದ್ದು ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
DYSP ಮಂಜುನಾಥ್ ಮಾತನಾಡಿ ಸರ್ಕಾರಿ ನೌಕರರು ಲೋಕಾಯುಕ್ತ ಪೋಲೀಸ್ ಎಂದು ಹೇಳಿಕೊಂಡು ಬರುವ ಬೆದರಿಕೆಯ ಸುಳ್ಳು ಕರೆಗಳನ್ನು ನಂಬಬೇಡಿ. ಯಾವ ಲೋಕಾಯುಕ್ತ ಪೋಲೀಸ್ ಎಂದಿಗೂ ಹಾಗೆ ಕರೆ ಮಾಡುವುದಿಲ್ಲ ಎಂದು ನೌಕರರಿಗೆ ತಿಳುವಳಿಕೆ ಹೇಳಿದರು. ಸಾರ್ವಜನಿಕರೊಂದಿಗೆ ತಾಳ್ಮೆ ಮತ್ತು ಸೌಜನ್ಯದಿಂದ ವರ್ತಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರು ಮಾತನಾಡಿ
ಇಂದು ಇಲ್ಲಿ ಸ್ವೀಕೃತವಾದ ಅಹವಾಲುಗಳನ್ನು ಪರಿಹರಿಸಲು ನಿಗದಿತ ಸಮಯದೊಳಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ತಹಶಿಲ್ದಾರ್ ಡಾ.ಪ್ರತಿಭಾ ಆರ್ “ಸಾರ್ವಜನಿಕರ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮವಹಿಸಲಾಗಿದೆ. ತಹಶಿಲ್ದಾರ್ ಕಚೇರಿಯಲ್ಲಿ ಪಾರದರ್ಶಕ ಆಡಳಿತ ನಡೆಯುತ್ತಿದೆ. ಯಾವುದೇ ಕೆಲಸವಿದ್ದರೂ ನೇರವಾಗಿ ತಹಶಿಲ್ದಾರ್ ರವರನ್ನು ಭೇಟಿ ಮಾಡಬಹುದು”
ಎಂದು ತಿಳಿಸಿದರು.
