27.2 C
Udupi
Friday, March 14, 2025
spot_img
spot_img
HomeBlogಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

ಕಾರ್ಕಳ : 1917ರಲ್ಲಿ ಆರಂಭವಾದ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್‌ ಇಂದು ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ. ಲಯನ್ಸ್‌ನ ಸೇವಾ ಕಾರ್ಯಗಳನ್ನು ವಿಶ್ವಸಂಸ್ಥೆಯು ಗುರುತಿಸಿ ಮನ್ನಣೆ ನೀಡಿದ್ದು, ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ನಾವೆಲ್ಲರೂ ಸೇರಿದ್ದೇವೆ ಎಂದು ಹೇಳಲು ತುಂಬಾ ಸಂತೋಷವಾಗುತ್ತಿದೆ ಎಂದು ಜಿಲ್ಲಾ ಗವರ್ನರ್‌ ಮೊಹಮ್ಮದ್‌ ಹನೀಫ್‌ ತಿಳಿಸಿದರು. ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ ಮೂಲಕ ಎಲ್ಲ ಸದಸ್ಯರ ಸಹಕಾರದಿಂದ ಇಂದು ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಮಾನವೀಯತೆಯನ್ನು ಸಮಾಜದಲ್ಲಿ ಪಸರಿಸಲು ಒಗ್ಗಟ್ಟಾಗಿ ಸೇರಿ ವಿವಿಧ ಕಾರ್ಯಯೋಜನೆಗಳನ್ನ ಮಾಡಿ ಹಲವಾರು ಕ್ರಿಯಾ ಯೋಜನೆಗಳನ್ನು ರೂಪಿಸಿ ಕಟ್ಟಕಡೆಯ ವ್ಯಕ್ತಿಗೆ ಇದರ ಸಹಾಯ ದೊರಕಲಿ ಎಂಬುವುದೆ ಸಿಟಿ ಕ್ಲಬ್‌ ತಂಡದ ಆಶಯವಾಗಿದೆ. ಅದೇ ರೀತಿ ಕಳೆದ ನಾಲ್ಕು ವರುಷಗಳಿಂದ ಲಯನ್ಸ ಸಂಸ್ಥೆಯಲ್ಲಿ ಭಾಗಿಯಾಗಿ ಇತ್ತೀಚೆಗೆ ಲಿಯೋ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ಎಂಬ ಲಿಯೋ ಕ್ಲಬ್‌ನ್ನು ಜಿಲ್ಲೆಗೆ ನೀಡಿರುವುದು ಈ ತಂಡದ ಸಾಧನೆ ಎಂದು ಹನೀಫ್‌ ಅವರು ಅಭಿಪ್ರಾಯಪಟ್ಟರು. ಅವರು ಮಾ. 11ರಂದು ಸಂಜೆ ನಡೆದ ಹೊಟೇಲ್‌ ಕಟೀಲ್‌ ಇಂಟರ್‌ ನ್ಯಾಶನಲ್‌ನಲ್ಲಿ ಜರುಗಿದ ಸಭೆಯನ್ನುದ್ಧೇಶಿಸಿ ಮಾತನಾಡಿದರು.

ಮಹಿಳೆಯರು ಬಹಳಷ್ಟು ಮುಂದುವರಿದಿದ್ದಾರೆ. ಅಡುಗೆಮನೆಯನ್ನು ನಿರ್ವಹಿಸುವುದರ ಜೊತೆಗೆ, ಕಚೇರಿಯಲ್ಲಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಓರ್ವ ಮಹಿಳೆ ಲಯನ್ಸ್‌ನ ಚುಕ್ಕಾಣಿ ಹಿಡಿದು ಮುನ್ನಡೆಯುತ್ತಿರುವದು, ಅದರೊಂದಿಗೆ ಇಂದು ನಾಲ್ವರು ಸಮರ್ಥ ಮಹಿಳಾ ಸದಸ್ಯರನ್ನು ಲಯನ್ಸ್‌ ಸಿಟಿ ಸಂಸ್ಥೆಗೆ ಸೇರಿಸಿರುವುದು ಅಧ್ಯಕ್ಷೆ ಜ್ಯೋತಿ ರಮೇಶ್‌ ಅವರ ಸಾಧನೆಯಾಗಿದೆ ಎಂದು ಜಿಲ್ಲೆಯ ಪ್ರಥಮ ಉಪಜಿಲ್ಲಾ ಗವರ್ನರ್‌ ಸಪ್ನಾ ಸುರೇಶ್‌ ಹೇಳಿದರು. ಮಹಿಳೆಯರು ಹೆಚ್ಚು ಸಮತೋಲಿತ ದೃಷ್ಟಿಕೋನವನ್ನು ನೀಡುತ್ತಾ ಸಮಾಜದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲಿ ಯಶಸ್ಸನ್ನು ಕಾಣಬೇಕೆನ್ನುವುದೆ ಅವಳ ಹಂಬಲವಾಗಿದೆ. ಈ ನಿಟ್ಟಿನಲ್ಲಿ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಸಂಸ್ಥೆ ಚಂದ್ರಹಾಸ ಸುವರ್ಣರ ಮಾರ್ಗದರ್ಶನದ ಜೊತೆಗೆ ತಂಡದ ಎಲ್ಲ ಸದಸ್ಯರ ಸಹಕಾರದಿಂದ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಮುನ್ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಕ್ಲಬ್‌ ಅಧ್ಯಕ್ಷೆ ಜ್ಯೋತಿ ರಮೇಶ್‌ ವಹಿಸಿದ್ದು, ಕೋಶಾಧಿಕಾರಿ ಟಿ. ಕೆ. ರಘುವೀರ್‌, ಕ್ಯಾಬಿನೆಟ್‌ ಕಾರ್ಯದರ್ಶಿ ಗಿರೀಶ್‌ ರಾವ್‌, ಎಲ್‌ಸಿಎಫ್‌ ಕೋಆರ್ಡಿನೇಟರ್‌ ಎಂಜೆಎಫ್‌ ಲಯನ್‌ ಹರಿಪ್ರಸಾದ್‌ ರೈ, ಪ್ರಾಂತೀಯ ಅಧ್ಯಕ್ಷ ಹರೀಶ್‌ ಬೆಳಂಜೆ, ವಲಯಾಧ್ಯಕ್ಷ ಶಾಕೀರ್‌ ಹುಸೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಘುನಾಥ್‌ ಕೆ.ಎಸ್‌. ಕ್ಲಬ್ಬಿನ ವರದಿಯನ್ನು ಮಂಡಿಸಿದರು.

ಗೌರವ ಸನ್ಮಾನ
ರಾಜ್ಯಮಟ್ಟದ ಕುಸ್ತಿ ಮತ್ತು ಕರಾಟೆಪಟು ಕಾರ್ಕಳದ ಕ್ರೈಸ್ಟ್‌ಕಿಂಗ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಸಾನ್ವಿ ನಾಯಕ್‌ ಮತ್ತು 33 ರವರುಷಗಳಿಂದ ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿಭಾಯಿಸಿದ ಕುಕ್ಕುಂದೂರು ಪರಪು ಅಂಗನವಾಡಿ ಕೇಂದ್ರದ ಲೀಲಾವತಿ ಪೂಜಾರಿ ಮತ್ತು ಸಾಣೂರು ಮುದ್ದಣ್ಣ ನಗರ ಅಂಗನವಾಡಿ ಕೇಂದ್ರದ ಪ್ರೇಮಾ ಪೂಜಾರಿ ಇವರನ್ನು ಗುರುತಿಸಿ ಗೌರವಿಸಲಾಯಿತು. ವಿವಿಧ ಕ್ಲಬ್ಬ್‌ಗಳಿಂದ ಆಗಮಿಸಿದ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಗೌರವಿಸಲಾಯಿತು. 2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಜನೆಗಾಗಿ ಮೂವರು ಪಿಯುಸಿ ವಿದ್ಯಾರ್ಥಿಗಳಿಗೆ ಸಹಾಯಧನವನ್ನು ವಿತರಣೆ ಮಾಡಲಾಯಿತು. ಸುರಕ್ಷಾ ಸೇವಾಶ್ರಮಕ್ಕೆ ದಾನಿಗಳ ಸಹಕಾರದೊಂದಿಗೆ ಸಹಾಯಧನವನ್ನು ವಿತರಣೆ ಮಾಡಲಾಯಿತು. ಲಿಯೋ ಕ್ಲಬ್ಬನ್ನು ಜಿಲ್ಲೆಗೆ ನೀಡಿರುವ ಲಯನ್ಸ್‌ ಸಿಟಿಯ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಜಿಲ್ಲಾ ಗವರ್ನರ್‌ ಸನ್ಮಾನಿಸಿದರು.

ಪ್ರಾರ್ಥನೆಯನ್ನು ಪ್ರಣ್ವಿ ನೆರವೇರಿಸಿ, ಧ್ವಜವಂದನೆಯನ್ನು ವಿಜೇಶ್‌ ಶೆಟ್ಟಿ ನಡೆಸಿಕೊಟ್ಟರು. ಅಧ್ಯಕ್ಷರು ಸ್ವಾಗತಿಸಿ, ನಿಹಾಲ್‌ ಶೆಟ್ಟಿ ನಿರೂಪಿಸಿದರು. ಸನ್ಮಾನಿತರ ಪಟ್ಟಿಯನ್ನು ಪ್ರಮೀಳಾ ಮತ್ತು ಶಾಲಿನಿ ಹಾಗೂ ಜಿಲ್ಲಾ ಗವರ್ನರ್‌ ಅವರ ಪರಿಚಯವನ್ನು ಪೂರ್ಣಿಮಾ ಶೆಣೈ ವಾಚಿಸಿದರು. ಸಭೆಯ ಬಳಿಕ ನೃತ್ಯ ಕಾರ್ಯಕ್ರಮ ಸ್ಥಳೀಯ ಮಕ್ಕಳಿಂದ ಜರುಗಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page