
ಕಾರ್ಕಳ: ರೋಟರಿ ಕ್ಲಬ್ ಕಾರ್ಕಳ ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಹಾಗೂ ಶೀತಲ್ ಗಾರ್ಡನ್ ಫ್ಯಾಮಿಲಿ ರೆಸ್ಟೋರೆಂಟ್ ನ ಆಡಳಿತ ನಿರ್ದೇಶಕರಾಗಿರುವ ನವೀನ್ ಚಂದ್ರ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಉದ್ಯಮಿ ಚೇತನ್ ನಾಯಕ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಜುಲೈ 2ರ ಬುಧವಾರ ಸಮಯ 6:30ಕ್ಕೆ ಪ್ರಕಾಶ್ ಹೋಟೆಲ್ ನ ಉತ್ಸವ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ ನಡೆಯಲಿದೆ. ರೋಟರಿ ಡಿಸ್ಟ್ರಿಕ್ಟ್ ಅಡ್ವೈಸರ್ ಅಭಿನಂದನ್ ಎ ಶೆಟ್ಟಿ ಪದಪ್ರಧಾನ ಅಧಿಕಾರಿಯಾಗಿ ಭಾಗವಹಿಸಲಿದ್ದು, ರೋಟರಿ ಅಸಿಸ್ಟೆಂಟ್ ಗವರ್ನರ್ ವಿಘ್ನೇಶ್ ಶೆಣೈ ಬಿ, ಅನಿಲ್, ಝೋನಲ್ ಲೆಫ್ಟಿನೆಂಟ್ ಜಾನ್ ಆರ್. ಡಿ ಸಿಲ್ವಾ, ಸುರೇಶ್ ನಾಯಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.






















































