
ಕಾರ್ಕಳ: ಜುಲೈ 12 ಅಂತರಾಷ್ಟ್ರೀಯ ಪೇಪರ್ ಬ್ಯಾಗ್ ದಿನಾಚರಣೆಯ ಪ್ರಯುಕ್ತ ಕಾರ್ಕಳ ರೋಟರಾಕ್ಟ್ ಕ್ಲಬ್ ವತಿಯಿಂದ ಪೇಪರ್ ಬ್ಯಾಗ್ ಗಳನ್ನು ತಯಾರಿಸಿ ಕಾರ್ಕಳದ ವಿವಿಧ ಮೆಡಿಕಲ್ ಸ್ಟೋರ್ ಹಾಗೂ ಅಂಗಡಿಗಳಿಗೆ ವಿತರಿಸಲಾಯಿತು ಮತ್ತು ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ Rtn.ಇಕ್ಬಾಲ್ ಅಹಮದ್, ಕಾರ್ಕಳ ರೋಟರಾಕ್ಟ್ ಕ್ಲಬ್ಬಿನ ಅಧ್ಯಕ್ಷರಾದ Rtr. ಸುನಿಲ್ ನಾಯಕ್, ಸಭಾಪತಿಯವರಾದ Rtn. PHF ನಿರಂಜನ್ ಜೈನ್, ರೋಟರಿ ಜಿಲ್ಲೆ 3182ರ ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ Rtr. ಚೇತನ್ ಕುಮಾರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.






