
ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿಯು ತನ್ನ ಪ್ರವೇಶ ಪತ್ರದ ಸೂಚನೆಯಲ್ಲಿ ರೈಲ್ವೇ ನೇಮಕಾತಿ ಪರೀಕ್ಷೆ ವೇಳೆ ಮಂಗಳಸೂತ್ರ ಧರಿಸಿದ್ರೆ ಪರೀಕ್ಷೆಗೆ ಅವಕಾಶವಿಲ್ಲ ಎಂಬ ಸೂಚನೆಯನ್ನು ನೀಡಿದ್ದು ಇದಕ್ಕೆ ಬಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ನಿರ್ಬಂಧವನ್ನು ಹಿಂಪಡೆದಿದೆ.
ಮಾರ್ಗಸೂಚಿಯಲ್ಲಿ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂದು ಉಲ್ಲೇಖಿಸಲಾಗಿತ್ತು. ಈ ಬಗ್ಗೆ ಸಂಸದರು, ಶಾಸಕರು ಮನವಿ ಮಾಡಿದ ಹಿನ್ನೆಲೆ ಕೇಂದ್ರ ಸಚಿವ ಸೋಮಣ್ಣ ಟ್ವೀಟ್ ಮೂಲಕ ಜನಿವಾರ, ಮಾಂಗಲ್ಯ, ಸಂಸ್ಕೃತಿ ಬಿಂಬಿಸುವ ಯಾವುದೇ ವಸ್ತು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸೂಚನೆ ನೀಡಿದ್ದಾರೆ.