28.7 C
Udupi
Sunday, February 15, 2026
spot_img
spot_img
HomeBlogರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಸಾಕ್ಷ್ಯಾದಾರಗಳು ಪತ್ತೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಸಾಕ್ಷ್ಯಾದಾರಗಳು ಪತ್ತೆ

spot_imgspot_img

ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ವಿಚಾರಣೆ ವೇಳೆ ಅವರು ಇದೇ ಹೇಳಿಕೆಯನ್ನು ರಿಪೀಟ್ ಮಾಡುತ್ತಿದ್ದು ಆದರೆ ಅವರ ವಿರುದ್ಧ ಸಾಕ್ಷ್ಯಗಳು ಬಲವಾಗಿ ಸಿಕ್ಕಿವೆ.

ಸದ್ಯ ಈ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಹಾಗೂ ದರ್ಶನ್ ಎ2 ಆರೋಪಿಯಾಗಿದ್ದು ಒಟ್ಟೂ 17 ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

ದರ್ಶನ್ ವಿರುದ್ಧ ಸಿಕ್ಕಿರುವ ಸಾಕ್ಷಿಗಳು:

ಕೊಲೆಯಾದ ಸ್ಥಳದಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜ್, ವಿನಯ್, ಸೇರಿ ಆರು ಮಂದಿ ಮೊಬೈಲ್ ಇತ್ತು ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.ಕೊಲೆಯ ನಂತರ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚಿಸಿರೋ ಕಾಲ್ ಡಿಟೇಲ್ಸ್ ಸಿಕ್ಕಿದೆ.ಕೃತ್ಯದ ನಂತರ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಿದ್ದಾರೆ.ಮೃತದೇಹ ಬಿಸಾಡಲಿಕ್ಕೆ ಸರೆಂಡರ್ ಆದವರಿಗೆ ತಲಾ ಐದು ಲಕ್ಷ ನೀಡಲಾಗಿದೆ. ಈಗ ಹಣ ಜಪ್ತಿ ಮಾಡಲಾಗಿದೆ.

ದೀಪಕ್ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗ ಆಗಿದೆ.ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್ ಹಾಗೂ ಪವಿತ್ರಾ ಗೌಡ ಬಗ್ಗೆ ಹೇಳಿಕೆ ನೀಡಲಾಗಿದೆ.ರೇಣುಕಾ ಸ್ವಾಮಿ ತನಗೆ ಅಶ್ಲೀಲ ಮೆಸೇಜ್ ಮಾಡ್ತಿದ್ದ ಅದನ್ನ ದರ್ಶನ್ಗೆ ತಿಳಿಸಿದ್ದಾಗಿ ಪವಿತ್ರ ಹೇಳಿಕೆ ನೀಡಿದ್ದಾರೆ.

ರೇಣುಕಾ ಸ್ವಾಮಿಯನ್ನು ತಾವು ಕಿಡ್ನ್ಯಾಪ್ ಮಾಡಿದ್ದಾಗಿ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಒಪ್ಪಿಕೊಂಡಿದ್ದಾರೆ.ಪವನ್, ಪವಿತ್ರಾ ಹಾಗೂ ದರ್ಶನ್ ಹೇಳಿದ್ದಕ್ಕೆ ರೇಣುಕಾಸ್ವಾಮಿ ಕರೆತಂದಿರೋದಾಗಿ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.ಆರ್.ಆರ್. ನಗರದ ಶೆಡ್ನಲ್ಲಿ ಮೃತ ರೇಣುಕಾ ಸ್ವಾಮಿಯ ರಕ್ತದ ಕಲೆ, ಕೂದಲು ಹಾಗೂ ಬೆವರಿನ ಸ್ಯಾಂಪಲ್ಸ್ ಸಿಕ್ಕಿದೆ.

ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್, ಬ್ಲಡ್ ಸ್ಯಾಂಪಲ್ನ ಪೊಲೀಸರು ಪಡೆದಿದ್ದಾರೆ.
ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ರೇಣುಕಾಸ್ವಾಮಿ ಬ್ಲಡ್ ಸ್ಯಾಂಪಲ್, ಫಿಂಗರ್ ಪ್ರಿಂಟ್, ಫುಟ್ ಫ್ರಿಂಟ್ನ ಆರೋಪಿಗಳ ಫಿಂಗರ್ ಪ್ರಿಂಟ್, ಫುಟ್ ಪ್ರಿಂಟ್ ಹಾಗೂ ಬ್ಲಡ್ ಸ್ಯಾಂಪಲ್ ಜೊತೆ ಮ್ಯಾಚ್ ಮಾಡಿ ನೋಡೋ ಸಾಧ್ಯತೆ ಇದೆ.

ರೇಣುಕಾ ಸ್ವಾಮಿಯ ಕೊಲೆಯಾದ ನಂತರ ದೀಪಕ್, ವಿನಯ್ ಹಾಗೂ ಪವನ್ ಪದೇ ಪದೇ ದರ್ಶನ್ಗೆ ಕರೆ ಮಾಡಿದ್ದಾರೆ.

ಇದಿಷ್ಟು ಪ್ರಮುಖವಾಗಿ ದೊರೆತಿರುವ ಸಾಕ್ಷಿಗಳಾಗಿವೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page