
ರೆಂಜಾಳ ಹಾಲು ಉತ್ಪಾದಕರ ಸಹಕಾರಿ ಸಂಘ, ಇದರ 2024-25ನೇ ಸಾಲಿನ 15ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ ಜೋನ್ ಮಸ್ಕರೇನಸ್ ಇವರ ಅಧ್ಯಕ್ಷತೆಯಲ್ಲಿ ರೆಂಜಾಳ ಗ್ರಾಮ ಪಂಚಾಯತ್ ನಲ್ಲಿ ಜರಗಿತು.
ಈ ಸಂದರ್ಭದಲ್ಲಿ 2024-25 ನೇ ಸಾಲಿನ ಲೆಕ್ಕಪತ್ರ ಮಂಡನೆ, ಹಾಗೂ ವರದಿ ಸಾಲಿನಲ್ಲಿ ಸಂಘವು ಗಳಿಸಿದ ನಿವ್ವಳ ಲಾಭ ರೂ. 192976.47 ಗಳಿಸಿದ್ದು, ಸದಸ್ಯರಿಗೆ ಶೇ. 65 ಬೋನಸ್ಸು ಮತ್ತು ಶೇ. 15 ಡಿವಿಡೆಂಟ್ ನೀಡಲಾಯಿತು. ಅತೀ ಹೆಚ್ಚು ಹಾಲು ನೀಡಿದ 3 ಜನ ಸದಸ್ಯರಿಗೆ ನಗದು ಬಹುಮಾನ, 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಸನ್ಮಾನ ಹಾಗೂ ಸ್ಕಾಲರ್ಷಿಪ್ ನೀಡಿ ಗೌರವಿಸಲಾಯಿತು. ಶೇಕಡಾ 75 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಘದಲ್ಲಿ ಸದಸ್ಯರಿಗೆ ತುರ್ತು ಸಂದರ್ಭದಲ್ಲಿ ಸಹಾಯವಾಗಲೆಂದು ಆರಂಭಿಸಿದ ಆಪತ್ಪಾಂದವ ನಿಧಿಯಿಂದ 2 ಜನ ಸದಸ್ಯರಿಗೆ ವೈದ್ಯಕೀಯ ವೆಚ್ಚಕ್ಕೆ ಸಹಾಯಧನವನ್ನು ನೀಡಲಾಯಿತು.
ಒಕ್ಕೂಟದ ಉಪಾಧ್ಯಕ್ಷರಾದ ಉದಯ್ ಎಸ್ ಕೋಟ್ಯಾನ್ ರವರು ಮಾತನಾಡಿ, ಸಂಘದಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಬೇಕು ಹಾಗೂ ನಂದಿನಿ ಪಶು ಆಹಾರವನ್ನೇ ಬಳಕೆ ಮಾಡಬೇಕು ಎಂದು ಹೇಳಿದರು. ಒಕ್ಕೂಟದ ನಿರ್ದೇಶಕರಾದ ಸುಧಾಕರ್ ಶೆಟ್ಟಿ ರವರು ಮಾತನಾಡಿ, ವ್ಯವಸ್ಥಿತ ರೀತಿಯಲ್ಲಿ ಹಾಲು ಉತ್ಪಾದನೆಯನ್ನು ಮಾಡಿದಲ್ಲಿ ಹೈನುಗಾರಿಕೆ ಲಾಭಧಾಯಕ ಎಂದು ಹೇಳಿದರು. ಒಕ್ಕೂಟದ ಮೇಲ್ವಿಚಾರಕರಾದ ಶಿವಕುಮಾರ್ ಇವರು ಮಾತನಾಡಿ, ರೆಂಜಾಳ ಸಂಘವು ಲೆಕ್ಕ ಪರಿಶೋಧನೆ ಯಲ್ಲಿ ನಿರಂತರ ಎ ಗ್ರೇಡ್ ಬರುತ್ತಿದ್ದು, ಸಂಘದ ವ್ಯವಹಾರವು ಉತ್ತಮ ರೀತಿಯಲ್ಲಿ ಇದೆ ಎಂದು ತಿಳಿಸಿದರು ಮತ್ತು ಒಕ್ಕೂಟ ದಲ್ಲಿ ಸಿಗುವ ವಿವಿಧ ಸೌಲಭ್ಯ ಗಳ ಬಗ್ಗೆ ವಿಸ್ಥಾರ ವಾಗಿ ಮಾಹಿತಿ ನೀಡಿದರು. ರೆಂಜಾಳ ಗ್ರಾಮ ಪಂಚಾಯತ್ ಪಿಡಿಓ ಪದ್ಮ ಕುಮಾರಿ ಇವರು ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮುಖ್ಯ ಪ್ರಬಂಧಕರು ಬ್ಯಾಂಕ್ ನ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಉಪಾಧ್ಯಕ್ಷರಾದ ಉದಯ್ ಎಸ್ ಕೋಟ್ಯಾನ್ ಮತ್ತು ಒಕ್ಕೂಟದ ನಿರ್ದೇಶಕರಾದ ಸುಧಾಕರ್ ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ವಿನೋದ ಶೆಟ್ಟಿ, ನಿರ್ದೇಶಕರಾದ ಸಂಪತ್ ಕುಮಾರ್, ಸೀತಾರಾಮ್ ಭಟ್, ಉಮೇಶ್ ಶೆಟ್ಟಿ, ಜಯವರ್ಮ ಜೈನ್, ಸಾಧು ಡಿ ಪೂಜಾರಿ, ರಾಜು ಪೂಜಾರಿ, ರತ್ನರಾಜ್ ಜೈನ್, ಜೆಸಿಂತಾ ತಾವ್ರೊ , ಜಯರಾಮ್ ಶೆಟ್ಟಿ, ಕಾಡ್ಯ ಉಪಸ್ಥಿತರಿದ್ದರು.
ನಿರ್ದೇಶಕರಾದ ಜಯರಾಮ್ ಶೆಟ್ಟಿ ಸ್ವಾಗರಿಸಿದರು, ಕಾರ್ಯನಿರ್ವಹಣಾಧಿಕಾರಿ ರಮೇಶ್ ವಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ನಿರ್ದೇಶಕರಾದ ಸಂಪತ್ ಕುಮಾರ್ ವಂದಿಸಿದರು.