ನವರಾತ್ರಿಯ ಪರ್ವಕಾಲದಲ್ಲಿ ಬಟ್ಟೆ ಚೀಲ ಹಂಚಿ ಜಾಗೃತಿ ಮೂಡಿಸಿದ ರೆಂಜಾಳ ಪಂಚಾಯತ್ ಸದಸ್ಯರು,ಸಿಬ್ಬಂದಿಗಳು

ರೆಂಜಾಳ ಗ್ರಾಮ ಪಂಚಾಯತ್ ನಲ್ಲಿ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಅಭಿಯಾನವನ್ನು ಹಮ್ಮಿಕೊಂಡಿದ್ದು ಸೆ.22 ರಂದು ರೆಂಜಾಳ ಮಹಮ್ಮಾಯಿ ದೇವಸ್ಥಾನದಲ್ಲಿ ಬಟ್ಟೆ ಚೀಲವನ್ನು ವಿತರಣೆ ಮಾಡುವ ಮೂಲಕ,ಪ್ಲಾಸ್ಟಿಕ್ ಚೀಲ ಬಳಸದಂತೆ ಜಾಗೃತಿ ಮೂಡಿಸಿದರು.
ಈ ಅಭಿಯಾನಕ್ಕೆ ರೆಂಜಾಳ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತದಾರರಾದ ಬ್ರಾಣಬೆಟ್ಟು ಮಹಾವೀರ ಹೆಗ್ಡೆಯವರು ಚಾಲನೆ ನೀಡಿದರು.
ದುಡಿಮೆಯ ಕಿಂಚಿತ್ತು ಭಾಗ ಸ್ವಚ್ಛ ಪರಿಸರಕ್ಕಾಗಿ
ರೆಂಜಾಳ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್ ವಿ ಶೆಟ್ಟಿ,ಉಪಾಧ್ಯಕ್ಷೆ ಪುಷ್ಪ ಗೌಡ,ಪಿಡಿಒ ಪದ್ಮಕುಮಾರಿ,ಸದಸ್ಯರಾದ ವೃಷಭರಾಜ್ ಜೈನ್,ರಮೇಶ್ ಶೆಟ್ಟಿ ಮಂಜೊಟ್ಟು,ದೀಪಿಕಾ ಶೆಟ್ಟಿ,ಆಶಾ,ಸುನಂದಾ ಹಾಗೂ ಪಂಚಾಯತ್ ಸಿಬ್ಬಂದಿಗಳಾದ ನಳಿನಿ,ಶೋಭಾ,ಸುಪ್ರಿಯಾ,ಅಶ್ವಿನಿ,ಲಲಿತಾ,ಪ್ರಮತ್,ನವೀನ್,ನಾಗೇಶ್,ಹಾಗೂ ಸಂಸ್ಕೃತಿ ಸಿಂಚನ ಸಂಚಾಲಕರಾದ ರಾಜೇಶ್ ರೆಂಜಾಳ ,ಖ್ಯಾತ ವಾಗ್ಮಿ ಮುನಿರಾಜ್ ರೆಂಜಾಳ,ಶಶಿಕಾಂತ್ ರೆಂಜಾಳ,ಸುಜೇಶ್ ಜೈನ್,ಉಮೇಶ್ ಶೆಟ್ಟಿ ಮುಂತಾದವರ ಸಹಕಾರದಲ್ಲಿ ಬಟ್ಟೆ ಕೈ ಚೀಲವನ್ನು ಗ್ರಾಮಸ್ಥರಿಗೆ ವಿತರಿಸಿದರು.
























































