ಮೊದಲ ದಿನವೇ 55 ಕೋಟಿ ರೂ. ಗಳಿಕೆ

ಬಹು ನಿರೀಕ್ಷಿತ ಚಿತ್ರ , ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಚಾಪ್ಟರ್ 1 ನಿನ್ನೆ ಅಕ್ಟೋಬರ್ ಎರಡರಂದು ತೆರೆಕಂಡಿದ್ದು ಮೊದಲ ದಿನವೇ ಚಿತ್ರ ನಿರೀಕ್ಷೆಗೂ ಮೀರಿ ಗಳಿಕೆ ಕಂಡಿದೆ.
ಭಾರತದಲ್ಲಿ ಒಟ್ಟು 6,500 ಸ್ಕ್ರೀನ್ ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದು ಎಲ್ಲಾ ಭಾಷೆಗಳಿಗೂ ಸೇರಿ ಭಾರತದಲ್ಲಿ ಅಂದಾಜು 45 ಕೋಟಿ ರೂಪಾಯಿ, ವಿದೇಶದಲ್ಲಿ 10 ಕೋಟಿ ರೂಪಾಯಿ ಗಳಿಕೆಯ ಮೂಲಕ ದಾಖಲೆ ನಿರ್ಮಾಣವಾಗಿದೆ. ಇಂದು ಅ. 3 ರಾತ್ರಿಯಾ ಹೊತ್ತಿಗೆ ಸುಮಾರು ನೂರು ಕೋಟಿ ರೂ. ಕಲೆಕ್ಷನ್ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಈಗಾಗಲೇ 10 ಲಕ್ಷಕ್ಕೂ ಅಧಿಕ ಟಿಕೇಟುಗಳು ಮಾರಾಟವಾಗಿದ್ದು ಅಕ್ಟೋಬರ್ 2ರಂದು ಪ್ರತಿ ಗಂಟೆಗೆ 60,000 ಟಿಕೆಟ್ ಸೋಲ್ಡ್ ಆಗಿದೆ ಎಂದು ಅಂದಾಜಿಸಲಾಗಿದೆ.



















