30.6 C
Udupi
Tuesday, March 3, 2026
spot_img
spot_img
HomeBlogರಿಯಾದ್ ಅಮೆರಿಕ ರಾಯಭಾರಿ ಕಚೇರಿ ಮೇಲೆ ಭೀಕರ ಡ್ರೋನ್ ದಾಳಿ

ರಿಯಾದ್ ಅಮೆರಿಕ ರಾಯಭಾರಿ ಕಚೇರಿ ಮೇಲೆ ಭೀಕರ ಡ್ರೋನ್ ದಾಳಿ

ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಇಂದು ಮುಂಜಾನೆ ಭಾರೀ ಡ್ರೋನ್ ದಾಳಿ ನಡೆದಿರುವುದು ವರದಿಯಾಗಿದೆ. ಈ ದಾಳಿಗೆ ಇರಾನ್ ಬೆಂಬಲಿತ ಪಡೆಗಳು ಕಾರಣರಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದ್ದು, ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಆತಂಕ ವ್ಯಕ್ತವಾಗಿದೆ.

ರಿಯಾದ್‌ನ ಡಿಪ್ಲೋಮ್ಯಾಟಿಕ್ ಕ್ವಾರ್ಟರ್ ಪ್ರದೇಶದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಎರಡು ಆತ್ಮಹತ್ಯಾ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ತಿಳಿದುಬಂದಿದೆ. ದಾಳಿಯ ಪರಿಣಾಮವಾಗಿ ಕಚೇರಿ ಆವರಣದಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ದಾಳಿ ನಡೆದ ವೇಳೆಯಲ್ಲಿ ಕಚೇರಿ ಖಾಲಿಯಾಗಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಕಟ್ಟಡಕ್ಕೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೂ ದಾಳಿ ಮಾಡಲು ಮುಂದಾಗಿದ್ದ ನಾಲ್ಕು ಡ್ರೋನ್‌ಗಳನ್ನು ಸೌದಿ ವಾಯು ರಕ್ಷಣಾ ಪಡೆಗಳು ಸಮಯೋಚಿತ ಕ್ರಮ ಕೈಗೊಂಡು ಹೊಡೆದುರುಳಿಸಿವೆ. ಸೌದಿ ಪಡೆಗಳ ತ್ವರಿತ ಪ್ರತಿಕ್ರಿಯೆಯಿಂದ ಹೆಚ್ಚಿನ ಹಾನಿ ತಪ್ಪಿದೆ ಎಂದು ವರದಿಗಳು ತಿಳಿಸಿವೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page