25.7 C
Udupi
Monday, March 9, 2026
spot_img
spot_img
HomeBlogರಾಷ್ಟ್ರೀಯ ಹೆದ್ದಾರಿ ಇಲಾಖೆಯ,ನಿರಂತರ ಅವಾಂತರ…!?… ಸಾಣೂರಿನ ಜನತೆ ತತ್ತರ…!

ರಾಷ್ಟ್ರೀಯ ಹೆದ್ದಾರಿ ಇಲಾಖೆಯ,ನಿರಂತರ ಅವಾಂತರ…!?… ಸಾಣೂರಿನ ಜನತೆ ತತ್ತರ…!

ರಾಷ್ಟ್ರೀಯ ಹೆದ್ದಾರಿ _169 : ಚೈನೇಜ್ 694.700 ಮುರತಂಗಡಿ ಸರ್ವಿಸ್ ರಸ್ತೆ ಬ್ಯಾಂಕ್ ಆಫ್ ಬರೋಡ ಶಾಖೆಯ ಎದುರು.
ಅಗೆದ ರಸ್ತೆಯನ್ನು ಮುಚ್ಚಿಲ್ಲ!?!?

ಕಳೆದ 20 ದಿನಗಳಿಂದ ಮುರತ್ತಂಗಡಿ ಸರ್ವಿಸ್ ರಸ್ತೆಯ ಮಧ್ಯಭಾಗದಲ್ಲಿ ರಸ್ತೆಯನ್ನು ಅಗೆದು ಅಡಿಭಾಗದಲ್ಲಿರುವ ಕುಡಿಯುವ ನೀರಿನ ಎಚ್ಡಿ ಪೈಪ್ ಲೈನ್ ದುರಸ್ತಿಗೊಳಿಸಲು ಜೆಸಿಬಿಯಿಂದ ಅಗೆಯಲಾಗಿದ್ದು, ಪೈಪ್ಲೈನ್ ಸರಿಪಡಿಸಿದರೂ…
. ಇನ್ನೂ ಕೂಡ ಅಗೆದಿರುವ ಮಣ್ಣನ್ನು ಮುಚ್ಚದೆ ಸರ್ವಿಸ್ ರಸ್ತೆಯಲ್ಲಿ ವಾಹನಗಳಿಗೆ ಓಡಾಡಲು ಮತ್ತು ಜನರಿಗೆ ಸಂಚರಿಸಲು ತೀವ್ರ ತೊಂದರೆ ಉಂಟಾಗಿದೆ .

ಖಾಸಗಿ ಜಾಗಕ್ಕೆ ಹೋಗುವ ರಸ್ತೆಯ ಎದುರಿನಲ್ಲಿಯೇ ಆಗೆದಿರುವುದರಿಂದ ಮನೆಗೆ ವಾಹನ ಹೋಗಲು ಮತ್ತು ಸಂಚಾರಕ್ಕೆ ತೀವ್ರ ತಡೆ ಉಂಟಾಗಿದೆ.

ಈ ಬಗ್ಗೆ ದಿಲೀಪ್ ಬಿಲ್ಡ್ ಕನ್ ಸಂಸ್ಥೆಯ ಮ್ಯಾನೇಜರ್ ಬಾಲಾಜಿಯವರಲ್ಲಿ ತಿಳಿಸಿದರು ಕೂಡ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನಿಧಾನಗತಿ ಮತ್ತು ಬೇಜವಾಬ್ದಾರಿಯ ನಡವಳಿಕೆಗೆ ನಾಗರೀಕರಲ್ಲಿ ತೀವ್ರ ಆಕ್ರೋಶ ಮಡುಗಟ್ಟಿದೆ!!!.

ತೀವ್ರ ಪ್ರತಿಭಟನೆಗೆ ಸಿದ್ಧತೆ!?!?

ಸ್ಥಳೀಯ ನಾಗರಿಕರು ರಸ್ತೆಗಿಳಿದು ತೀವ್ರ ಪ್ರತಿಭಟನೆ ಮಾಡುವ ಮೊದಲು ಅಗೆದಿರುವ ರಸ್ತೆಯ ಭಾಗವನ್ನು ಸರಿಪಡಿಸಿ ಸುಮಾರು 800 ಮೀಟರ್ ಉದ್ದದ ಸರ್ವಿಸ್ ರಸ್ತೆಗೆ ಕೇವಲ ಜಲ್ಲಿ ಮಾತ್ರ *ಹಾಕಿ 2 ತಿಂಗಳುಗಳು ** ಕಳೆದಿವೆ ಇನ್ನೂ ಡಾಮಾರಿಕರಣ ಮಾಡಿಲ್ಲ . ಕೂಡಲೇ ಡಾಮಾರೀಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಅಗೆದಿರುವ ರಸ್ತೆಯ ಭಾಗಕ್ಕೆ ಮಣ್ಣು ತುಂಬಿ ಸರಿಪಡಿಸಿ
ಕೂಡಲೇ ಡಾಮಾರೀಕರಣ ಮಾಡಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಮೇಲೆ ವಾಹನ ಮತ್ತು ಜನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಆಗ್ರಹಿಸಿರುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page