28.4 C
Udupi
Thursday, January 1, 2026
spot_img
spot_img
HomeBlogರಾಷ್ಟ್ರೀಯ ಮಟ್ಟದಲ್ಲಿ ಜೇಸಿಐ ಕಾರ್ಕಳ ಸಾಧನೆ2025 ರ ಯಶಸ್ವಿ ಅಧ್ಯಕ್ಷೆ ಶ್ವೇತಾ ಎಸ್ ಜೈನ್ ರವರಿಗೆ...

ರಾಷ್ಟ್ರೀಯ ಮಟ್ಟದಲ್ಲಿ ಜೇಸಿಐ ಕಾರ್ಕಳ ಸಾಧನೆ2025 ರ ಯಶಸ್ವಿ ಅಧ್ಯಕ್ಷೆ ಶ್ವೇತಾ ಎಸ್ ಜೈನ್ ರವರಿಗೆ ಪ್ರಶಸ್ತಿ ಹಾಗೂ ಮನ್ನಣೆಗಳು

ಚೆನ್ನೈ : ಚೆನ್ನೈಯಲ್ಲಿ ನಡೆದ ಜೇಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ, ಜೇಸಿಐ ಕಾರ್ಕಳವು ಹಲವಾರು ಪ್ರಶಸ್ತಿಗೆ ಮನ್ನಣೆಗಳಿಗೆ ಭಾಜನವಾಗಿದೆ.

ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್‌ ಅವರಿಗೆ ಔಟ್‌ಸ್ಟ್ಯಾಂಡಿಗ್‌ ಸ್ಪೋರ್ಟ್ಸ್‌ ಡೆವಲಪ್ಮೆಂಟ್ ಪ್ರೋಗ್ರಾಮ್‌ ಪ್ರಶಸ್ತಿ, ,ಜೇಸಿಐ ಭಾರತ ಕೊಡಮಾಡುವ 100% ಕ್ಷಮತೆ ಪ್ರಶಸ್ತಿ , ಜೇಸಿಐ ಕಾರ್ಕಳ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ವಂದನಾ ರೈ ಅವರಿಗೆ ಡಿಜಿಟಲ್‌ ಇನ್ಫ್ಲುಯೆನ್ಸರ್ ಆವಾರ್ಡ್, ವರ್ಧಮಾನ್‌ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕರ್ತವ್ಯ ಜೈನ್‌ ಅವರಿಗೆ ರಾಷ್ಟ್ರೀಯ‌ ಮಟ್ಟದ ಎಫೆಕ್ಟಿವ್‌ ಪಬ್ಲಿಕ್‌ ಸ್ಪೀಕಿಂಗ್‌ ಪ್ರಶಸ್ತಿ ಲಭಿಸಿದೆ. ಜೇಸಿಐ ಕಾರ್ಕಳಕ್ಕೆ ಒಟ್ಟು 10 ಮನ್ನಣೆಗೆ ಪಾತ್ರವಾಗಿದ್ದು, ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಅಂಕುರ್‌ ಜುಂಝೂನವಾಲ ಪ್ರಶಸ್ತಿ ಹಸ್ತಾಂತರಿಸಿದರು. ಜೇಸಿಐ ವಲಯ 15ರ ಅಧ್ಯಕ್ಷ ಅಭಿಷೇಕ್‌ ಬಿ.ಎ., ಜೇಸಿಐ ಕಾರ್ಕಳದ ಪೂರ್ವ ಅಧ್ಯಕ್ಷ ವಿಘ್ನೇಶ್‌ ಪ್ರಸಾದ್, ಸಾಹಿನಾ ರಿಜ್ವಾನ್‌ ಖಾನ್‌ ಮತ್ತಿತರರು ಈ ಸಂದರ್ಭದಲ್ಲಿದ್ದರು.

ಜೇಸಿಐ ಕಾರ್ಕಳ ಜೇಸಿಐ ಭಾರತ ವಲಯ15 ರ ಪ್ರತಿಷ್ಠಿತ ಘಟಕ. ಹಲವಾರು ಸಮಾಜಮುಖಿ ಕಾರ್ಯಕ್ರಮ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಮಾಡಿ ಶೈಕ್ಷಣಿಕವಾಗಿ ,ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಸಂಸ್ಥೆ. 2025 ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್ ಜೈನ್ ಉತ್ತಮವಾದ ಕೆಲಸ, ಯೋಜಗಳೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ. ಅಧ್ಯಕ್ಷೆ ಅವಧಿಯನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡು ವಲಯದಲ್ಲಿ ಅತ್ಯುತ್ತಮ ಘಟಕದಾಧ್ಯಕ್ಷೆ ವಿನ್ನರ್ ಅವಾರ್ಡ್, ಉತ್ತಮ ಘಟಕ ಅವಾರ್ಡ್ ಪಡೆದುಕೊಂಡು ರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ಅಧ್ಯಕ್ಷೆಯಾಗಿ ಗುರುತಿಸಿಕೊಂಡಿರುತ್ತಾರೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page