ಫೈಟಿಂಗ್ ವಿಭಾಗ ಮತ್ತು ಪೂಮ್ಸೇ ವಿಭಾಗದಲ್ಲಿಯೂ ಚಿನ್ನದ ಪದಕ ಪಡೆದ ಮುರತಂಗಡಿಯ ಸಂತೋಷ್ ಆಚಾರ್ಯ

ಬೆಂಗಳೂರಿನಲ್ಲಿ 10-01-2026 ಮತ್ತು 11-01-2026 ರಂದು ನಡೆದಂತಹ VIFA CUP 2026 ನ ರಾಷ್ಟ್ರಮಟ್ಟದ ಮಾರ್ಷಲ್ ಆರ್ಟ್ಸ್ ಟೇಕ್ವಾಂಡೋ ಚಾಂಪಿಯನ್ ಶಿಪ್ ನಲ್ಲಿ ಸೀನಿಯರ್ ವಿಭಾಗದ, under 75 ಕೆ .ಜಿ ದೇಹ ತೂಕ ವಿಭಾಗದಲ್ಲಿ ಕರ್ನಾಟಕ ರಾಜ್ಯದಿಂದ ಮುರತ್ತಂಗಡಿಯ ಸಂತೋಷ್ ಆಚಾರ್ಯ ಇವರು ಪ್ರತಿನಿಧಿಸಿ ಫೈಟಿಂಗ್ ವಿಭಾಗದಲ್ಲಿ ಚಿನ್ನ ಮತ್ತು ಪೂಮ್ಸೇ ವಿಭಾಗದಲ್ಲಿಯೂ ಚಿನ್ನದ ಪದಕ ಪಡೆದಿರುತ್ತಾರೆ.ಇವರು ಮುರತ್ತಂಗಡಿಯ ದಿವಾಕರ ಆಚಾರ್ಯ ಮತ್ತು ನಳಿನಿ ದಂಪತಿಯ ಪುತ್ರ. ಇವರು ಸುರೇಶ್ ದೇವಾಡಿಗ ಇವರಿಂದ ತರಬೇತಿ ಪಡೆದಿರುತ್ತಾರೆ.



















