
ಬೆಂಗಳೂರಿನ ಬಂಟರ ಸಂಘದ ಆಶ್ರಯದಲ್ಲಿ ನಡೆದ ಅಂತರ್ ಬಂಟರ ಸಂಘಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕಾರ್ಕಳ ಬಂಟರ ಸಂಘ ಭಾಗವಹಿಸಿ ಅಗೋಳಿ ಮಂಜಣ್ಣ ನೃತ್ಯ ನಾಟಕ ಹಾಗು ಬಂಟ ಸಂಸ್ಕೃತಿ ಪ್ರತಿಬಿಂಬಿಸುವ ಬಂಟ ವೈಭವ ಕಾರ್ಯಕ್ರಮ ನೀಡಿ ಎಲ್ಲರ ಮೆಚ್ಚುಗೆ ಗಳಿಸಿ ಟ್ರೋಫಿ ಮತ್ತು ರೂ. 75,000 ನಗದು ಬಹುಮಾನ ಗಳಿಸಿದೆ .
ಕಾರ್ಕಳದ ಸುಧೀಂದ್ರ ಶಾಂತಿ ಹಾಗು ಸುಕೇಶ್ ಶೆಟ್ಟಿ ಕಾರ್ಕಳ ಇವರ ನಿರ್ದೇಶನದ ತಂಡ ವಿಜಯ್ ಶೆಟ್ಟಿ ಕಾರ್ಕಳ ಹಾಗು ಶ್ರೀಮತಿ ಪೂರ್ಣಿಮಾ ಹೆಗ್ಡೆ ಇವರ ಸಾರಥ್ಯದಲ್ಲಿ ಭಾಗವಹಿಸಿತ್ತು .






















































