26.7 C
Udupi
Saturday, March 15, 2025
spot_img
spot_img
HomeBlogರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಮತ್ತು ರಾಜೇಶ್ವರಿ ಏಜುಕೇಶನ್...

ರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಮತ್ತು ರಾಜೇಶ್ವರಿ ಏಜುಕೇಶನ್ ಫೌಂಡೇಶನ್ (ರಿ.) ಸಾಣೂರು ಸಹಯೋಗದಲ್ಲಿ,ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

ರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಮತ್ತು ರಾಜೇಶ್ವರಿ ಏಜುಕೇಶನ್ ಫೌಂಡೇಶನ್ (ರಿ.) ಸಾಣೂರು ಸಹಯೋಗದಲ್ಲಿ ಸಾಣೂರು ಗ್ರಾಮದ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನ SSLC ಮತ್ತು ದ್ವಿತೀಯ PUC ಯಲ್ಲಿ 2023-24ನೇ ಸಾಲಿನ ಶೇಕಡಾ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಹಾಗೂ ಉತ್ತಮ ಫಲಿತಾಂಶ ದಾಖಲಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ ಎಲ್ಲಾ ಮಕ್ಕಳಿಗೆ ಗೌರವ ಅಭಿನಂದನೆ ಕಾರ್ಯಕ್ರಮವು ರಿಜೆನ್ಸಿ ಹಾಲ್ ಮುರತ್ತoಗಡಿ ಸಾಣೂರು ಇಲ್ಲಿ ನಡೆಯಿತು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಮೂಡಬಿದ್ರೆಯ ಲೆಕ್ಕಪರಿಶೋಧಕಾರದ ಶ್ರೀ ಉಮೇಶ್ ರಾವ್ ಮಿಜಾರ್ ವಹಿಸಿ ಮಕ್ಕಳ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ರಿಜೆನ್ಸಿ ಹಾಲ್ ನ ಮಾಲಕರದ ರಮೇಶ್ ಸಾಲಿಯಾನ್ ನಡೆಸಿದರು. ರಾಜೇಶ್ವರಿ ಎಜುಕೇಶನ್ ಫೌಂಡೇಶನ್( ರಿ.) ಸಾಣೂರು ಇದರ ಮ್ಯಾನೇಜಿಂಗ್ ಡೈರೆಕ್ಟರ್ ಅದ ಶ್ರೀ ದೇವಿಪ್ರಸಾದ್ ಶೆಟ್ಟಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿಯ ಪ್ರಾಂಶುಪಾಲರಾದ ಶ್ರೀಮತಿ ಸುಚೇತಾ ಕಾಮತ್ ಇವರು ಮುಖ್ಯ ಅತಿಥಿಯಾಗಿ ಶುಭ ಹಾರೈಸಿದರು. ಅತಿಥಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ಗಣೇಶ್ ಮೊಗವೀರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಾರ್ಕಳ ಇಲ್ಲಿಯ ವಿಚಕ್ಷಣಾಧಿಕಾರಿ ಶ್ರೀಮತಿ ಶಾರದಾ ರೈ ಇವರು ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಪ್ರತೀಕ್ ಜೈನ್ ಇವರು ರಾಜ್ಯಕ್ಕೆ 5ನೇ ರಾಂಕ್ ಪಡೆದು ಸರಕಾರಿ ಶಾಲೆಯ ಗೌರವ ಹೆಚ್ಚಿಸಿದ್ದು, ಇವರಿಗೆ ವಿಶೇಷವಾಗಿ ಗೌರವದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ SSLC ಯಲ್ಲಿ 13 ಮಕ್ಕಳು ಮತ್ತು PUC ವಿಭಾಗದಲ್ಲಿ 35 ಮಕ್ಕಳಿಗೆ ಹೀಗೆ ಒಟ್ಟು 48 ಮಕ್ಕಳಿಗೆ ಗೌರವ ಸನ್ಮಾನ ಮಾಡಲಾಯಿತು. ಹಾಗೂ ಉತ್ತಮ ಫಲಿತಾಂಶಕ್ಕೆ ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗದ 130 ಮಕ್ಕಳಿಗೆ ಪುಸ್ತಕ ಮತ್ತು ಹೂವಿನೊಂದಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಇವರು ಪ್ರಸ್ತಾವಿಕ ಮಾತಿನೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಮಂಡಲದ ಕಾರ್ಯದರ್ಶಿ ಪ್ರಕಾಶ್ ರಾವ್ ಸಾಣೂರು ಇವರು ಸನ್ಮಾನದ ಎಲ್ಲಾ ಮಕ್ಕಳ ವಿವರವನ್ನು ವಾಚಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಸಮಿತಿ ಸದಸ್ಯರಾದ ಶ್ರೀ ಮೋಹನ್ ಶೆಟ್ಟಿಯವರು ನಿರ್ವಹಿಸಿದರು. ಧನ್ಯವಾದ ಸಮರ್ಪಣೆಯನ್ನು ಜೊತೆ ಕಾರ್ಯದರ್ಶಿಯಾದ ಪ್ರಮಿತ್ ಸುವರ್ಣ ಇವರು ನಡೆಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಶ್ರೀ ಅಲೆಕ್ಸ್ ಡಿಸಿಲ್ವ ಇವರನ್ನು ಗೌರವಿಸಲಾಯಿತು. ಮಾಜಿ ಅಧ್ಯಕ್ಷರುಗಳಾದ ಶಂಕರ್ ಶೆಟ್ಟಿ, ಗಣೇಶ್ ನಾಯಕ್, ಮಹೇಶ್ ಶೆಟ್ಟಿಗಾರ್, ಪ್ರಸಾದ್ ಪೂಜಾರಿ, ಜಗದೀಶ್ ಕುಮಾರ್, ಪ್ರಕಾಶ್ ಮಡಿವಾಳ, ರಾಘು ಪೂಜಾರಿ, ಭಾಗವಹಿಸಿದ್ದರು. ಮಂಡಲದ ಪದಾಧಿಕಾರಿಗಳಾದ ಶುಭಕರ ಶೆಟ್ಟಿ, ರಾಜೇಶ್ ಪೂಜಾರಿ, ಚಂದ್ರಹಾಸ್ ಪೂಜಾರಿ, ರೋಹಿತ್ ಆರ್. ಕೆ, ಪ್ರಶಾಂತ್ ಆಚಾರ್ಯ, ಪ್ರಸನ್ನ ಆಚಾರ್ಯ ಸುನಿಲ್, ಸುದರ್ಶನ್ ನಾಯ್ಕ್, ಸತೀಶ ಮಡಿವಾಳ, ಮುರಳಿದರ ಸುವರ್ಣ, ಜಯನ್ ಶೆಟ್ಟಿ, ಅಬ್ದುಲ್ ಗಪುರ್, ಜಯಶೆಟ್ಟಿಗಾರ್, ಸೀತಾರಾಮ್, ವಿಘ್ನೇಶ್ ರಾವ್, ಪ್ರಶಾಂತ್ ಶೆಟ್ಟಿ, ಪ್ರವೀಣ್ ಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page