26.5 C
Udupi
Tuesday, February 3, 2026
spot_img
spot_img
HomeBlogರಾಜ್ಯದ ಕೇಬಲ್ ಆಪರೇಟರ್‌ಗಳಿಗೆ ವಿದ್ಯುತ್ ಕಂಬಗಳಿಗೆ ವಿಧಿಸುವ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ...!

ರಾಜ್ಯದ ಕೇಬಲ್ ಆಪರೇಟರ್‌ಗಳಿಗೆ ವಿದ್ಯುತ್ ಕಂಬಗಳಿಗೆ ವಿಧಿಸುವ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ…!

ಬೆಳಗಾವಿ: ಇಂದಿನಿಂದ ಚಳಿಗಾಲದ ಬೆಳಗಾವಿ ಅಧಿವೇಶನ ಆರಂಭವಾಗಿದ್ದು ಕಾಂಗ್ರೆಸ್‌ ಸದಸ್ಯೆ ಬಲ್ಕಿಶ್‌ ಭಾನು, ರಾಜ್ಯದಲ್ಲಿ ಕೇಬಲ್‌ ಆಪರೇಟರ್‌ಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದು ಈ ವೇಳೆ ಇಂಧನ ಸಚಿವ ಕೆಜೆ ಜಾರ್ಜ್‌ ರಾಜ್ಯದ ಕೇಬಲ್‌ ಆಪರೇಟರ್‌ಗಳಿಗೆ ಈಗ ಇರುವ ಶುಲ್ಕದಲ್ಲಿ ಕೇಬಲ್‌ ಆಪರೇಟರ್‌ಗಳಿಗೆ ಶೇ. 50ರಷ್ಟು ರಿಯಾಯಿತಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.ಇಡೀ ರಾಜ್ಯದಲ್ಲಿ 2800 ಕೇಬಲ್ ಆಪರೇಟರ್ ಇದ್ದು ಒಂದು ಕಂಬಕ್ಕೆ ಮೊದಲು 40 ರೂಪಾಯಿ ಶುಲ್ಕ ನಿಗದಿ ಮಾಡಲಾಗುತ್ತಿತ್ತು. ಆದರೆ, ಸರ್ಕಾರ ಈಗ ಹೊಸ ಸುತ್ತೋಲೆ ಮಾಡಿ ಒಂದು ಕಂಬಕ್ಕೆ 150 ರೂಪಾಯಿ ಜಿಎಸ್‌ಟಿ ಕಟ್ಟಬೇಕು ಎಂದು ಆದೇಶ ಮಾಡಿದ್ದಾರೆ. ಇದೇ ವೇಳೆ ಲೈಸೆನ್ಸ್‌ ಫೀ ಎಂದು ಕೇಂದ್ರಕ್ಕೆ 5 ಸಾವಿರ ರೂಪಾಯಿ ಹಾಗೂ ಸ್ಥಳೀಯಾಡಳಿತಕ್ಕೆ ಫೀಸ್‌ ಕಟ್ಟಬೇಕು ಇದು ಸಮಸ್ಯೆ ಆಗುತ್ತಿದೆ ಎಂದು ಹೇಳಿದರು. ಗ್ರಾಮೀಣ ಹಾಗೂ ಮಲೆನಾಡು ಸೇರಿ ಹಲವು ಭಾಗದಲ್ಲಿ ಇದರಿಂದ ಸಮಸ್ಯೆ ಬಹಳ ಹೆಚ್ಚಾಗುತ್ತದೆ. ಈ ಫೀಸ್‌ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದು ಇದಕ್ಕೆ ಉತ್ತರ ನೀಡಿದ ಕೆಜೆ ಜಾರ್ಜ್‌, ಈಗ ಇರುವ ಶುಲ್ಕದಲ್ಲಿ 50%ದಷ್ಟು ರಿಯಾಯತಿ ಕೊಡುತ್ತೇವೆ. ಈ ಶುಲ್ಕವನ್ನು 75 ರೂ ಗೆ ಇಳಿಸುವುದಾಗಿ ಸದನದಲ್ಲಿ ಭರವಸೆ ನೀಡಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page