27 C
Udupi
Sunday, April 12, 2026
spot_img
spot_img
HomeBlog"ರಾಜ್ಯದಲ್ಲಿ ಭ್ರಷ್ಟಾಚಾರ, ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ಬಿಜೆಪಿಯವರು, ನಿಮ್ಮೆಲ್ಲಾ ಹಗರಣ ಹೊರತೆಗೆಯುವೆ": ಎಚ್ಚರಿಕೆ ನೀಡಿದ...

“ರಾಜ್ಯದಲ್ಲಿ ಭ್ರಷ್ಟಾಚಾರ, ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ಬಿಜೆಪಿಯವರು, ನಿಮ್ಮೆಲ್ಲಾ ಹಗರಣ ಹೊರತೆಗೆಯುವೆ”: ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ

ವಿಧಾನಸಭೆ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ರಾಜ್ಯದಲ್ಲಿ ಎಲ್ಲಾ ಭ್ರಷ್ಟಾಚಾರ, ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡವರು ನೀವು, ರಾಜಕೀಯಕ್ಕಾಗಿ ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದೀರಿ. ನಿಮ್ಮ ಎಲ್ಲಾ ಹಗರಣ ಹೊರತೆಗೆಯುತ್ತೇನೆ. ಭೋವಿ ನಿಗಮದಿಂದ ಹಿಡಿದು ಎಲ್ಲಾ ಅಕ್ರಮಗಳನ್ನೂ ಹೊರಗೆಡವುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಾಲ್ಮೀಕಿ ನಿಗಮದ ಹಗರಣ ಕುರಿತ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ‘ಸರ್ಕಾರ ದಲಿತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದಾಗ ಸಿಎಂ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ದಲಿತ ಪದ ಬಳಕೆ ಮಾಡುವಂತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಎಂದು ಹೇಳಿ’ ಎಂದಾಗ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಡಾ.ಸಿ.ಎನ್ ಅಶ್ವತ್ಥ್ನಾರಾಯಣ್, ಸುರೇಶ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ‘ಅಹಿಂದ’ ಮೂಲಕ ದಲಿತ ಎಂಬುದನ್ನು ಬಳಸಿದ್ದೇ ನೀವಲ್ಲವೇ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ, ‘ಬಿಜೆಪಿಯವರಿಗೆ ಆ ಪದ ಬಳಸುವ ನೈತಿಕತೆಯಿಲ್ಲ. ಅವರು ಸಾಮಾಜಿಕ ನ್ಯಾಯದ ವಿರೋಧಿಗಳು’ ಎಂದು ದೂರಿದರು. ಅಶ್ವತ್ಥನಾರಾಯಣ್‌ ಮಧ್ಯಪ್ರವೇಶಿಸಿ ನಿಮ್ಮ ಸರ್ಕಾರದಲ್ಲೇ ದಲಿತರ ಹಣ ಲೂಟಿ ಆಗಿದೆಯೆಲ್ಲಾ ಎಂದಾಗ ಸಿಟ್ಟಾದ ಸಿದ್ದರಾಮಯ್ಯ, ‘ಹೇ ಅಶ್ವತ್ಥನಾರಾಯಣಗೌಡ, ನಿಮ್ಮ ಹಗರಣಗಳು ಏನೇನಿವೆ ಎಂದು ತೆಗೆಯಬೇಕಾ? ಎಲ್ಲವನ್ನೂ ತೆಗೆಯುತ್ತೇನೆ’ ಎಂದು ಖಾರವಾಗಿ ಗುಡುಗಿದರು.

ಬಳಿಕ ಅಶ್ವತ್ಥನಾರಾಯಣ್ ಅವರು ಏರು ಧ್ವನಿಯಲ್ಲಿ ‘ಪೇ ಸಿಎಂ, 100 ಪರ್ಸೆಂಟ್‌ ಸರ್ಕಾರ’ ಎಂದು ಘೋಷಣೆ ಕೂಗುತ್ತಾ ‘ಏನು ಬೆದರಿಕೆ ಹಾಕುತ್ತಿದ್ದೀರಾ? ಯಾವ ಹಗರಣ ತೆಗೆಯುತ್ತೀರೋ ತೆಗೆಯಿರಿ’ ಎಂದು ಆಗ್ರಹಿಸಿದಾಗ ಆಕ್ರೋಶಗೊಂಡ ಸಿದ್ದರಾಮಯ್ಯ, ‘ನಿನಗಿಂತ ಜೋರು ಧ್ವನಿಯಲ್ಲಿ ಮಾತನಾಡಲು ನನಗೂ ಬರುತ್ತದೆ. ನೀವೆಲ್ಲಾ ಎದ್ದು ನಿಂತರೂ ನಾನು ಭಯಪಡುವುದಿಲ್ಲ. ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿದ್ದವರು ನಿಮ್ಮ ಪಕ್ಷದವರು. ನಿಮ್ಮ ಎಲ್ಲಾ ಹಗರಣ ಹೊರತೆಗೆಯುತ್ತೇನೆ. ತೆಗೆಯಲಾ? ಭ್ರಷ್ಟಾಚಾರ, ಅನಾಚಾರ ಮಾಡಿ ಅಧಿಕಾರ ಕಳೆದುಕೊಂಡ ನೀವು ನಮಗೆ ಹೇಳುತ್ತೀರಾ? ಎಪಿಎಂಸಿ ಹಗರಣ, ಭೋವಿ ನಿಗಮ, ಟ್ರಕ್ ಟರ್ಮಿನಲ್‌ ಹಗರಣ ಎಲ್ಲವನ್ನೂ ತೆಗೆಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page