
ರಾಜ್ಯದಲ್ಲಿನ ದೇವದಾಸಿ ಮಹಿಳೆಯರಿಗೆ ಕೂಡ ಗ್ರಹಲಕ್ಷ್ಮಿ ಯೋಜನೆಯ ಸೌಲಭ್ಯ ಲಭ್ಯವಾಗತಕ್ಕದ್ದು, ಒಂದು ವೇಳೆ ಈ ಬಗ್ಗೆ ಯಾವುದೇ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ದೇವದಾಸಿಯರಿಗೆ ಮಾಶಾಸನ ಸಿಗುತ್ತಿಲ್ಲ, ದೇವದಾಸಿಯರ ಮಾಶಾಸನ 5,000 ಕ್ಕೆ ಹೆಚ್ಚಳ ಮಾಡಬೇಕು. ಹಾಗೂ ಗ್ರಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಅವರಿಗೂ ನೀಡಬೇಕು ಎಂದು ಒತ್ತಾಯಿಸಿದ್ದು ಈ ಬಗ್ಗೆ ಪ್ರತಿಕ್ರಿಸಿದ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಮಾಶಾಸನ ಎಲ್ಲಿಯೂ ಕೂಡ ಸೋರಿಕೆ ಆಗಿಲ್ಲ. ಅವರಿಗೆ 2,000 ಮಾಶಾಸನ ಕೊಡಲಾಗುತ್ತಿದೆ ಹಾಗೂ ಪ್ರತಿವರ್ಷ 250 ದೇವದಾಸಿಯರಿಗೆ ಒಂದು ಸಾರಿಗೆ ಪ್ರೋತ್ಸಾಹ ಧನವಾಗಿ ರೂ.30,000 ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ಅನ್ವಯವಾಗುತ್ತಿದೆ ಎಂದು ತಿಳಿಸಿದರು.





