ಮನೆಗೆ ತೆರಳಿ ಅಭಿನಂದಿಸಿದ ತಂಡ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳ ಕ್ರೈಸ್ ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸುದೀಕ್ಷಾ ಶೆಟ್ಟಿ, ರಾಜ್ಯಕ್ಕೆ 5ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯಕ್ಕೆ ಐದನೇ ಮತ್ತು ಉಡುಪಿಗೆ ಪ್ರಥಮ ಸ್ಥಾನ ಪಡೆದ ಕಾರ್ಕಳದ ಜೋಡುರಸ್ತೆ ನಿವಾಸಿ ದೀಕ್ಷಾ ಮೆನೆಗೆ ಅವರು ಆಟವಾಡುತ್ತಿದ್ದ ಮೈದಾನದ ಸಹ ಆಟಗಾರರು ಮನೆಗೆ ಬೇಟಿ ನೀಡಿ ಶುಭ ಹಾರೈಸಿದರು.
ದೀಕ್ಷಾ ಒಬ್ಬಳು ವಾಲಿಬಾಲ್ ಆಟಗಾರ್ತಿಯಾಗಿ ತಮ್ಮ ಕಾಲೇಜು ತಂಡವನ್ನು ರಾಜ್ಯ ಮಟ್ಟವನ್ನು ಪ್ರತಿನಿದಿಸಿದ್ದು, ತಮ್ಮ ಜೊತೆ ಆಟಗಾರ್ತಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಬದಲ್ಲಿ ಕೋಚ್ ಸಂತೋಷ್ ಡಿಸಿಲ್ವಾ, ಪುರಸಭಾ ಸದಸ್ಯ ಶುಭದರಾವ್, ಜೀವನ್, ವೆಂಕಟೇಶ್, ಪ್ರತಿಮಾ ಮೊದಲಾದವರು ಉಪಸ್ಥಿತಿತರಿದ್ದರು.