
ಉಡುಪಿ: ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಕೆ ಅಣ್ಣಮಲೈ ತಮಿಳುನಾಡು ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಆದರೆ ಮುಂದೆ ನಡೆಯಲಿರುವ ಅಧ್ಯಕ್ಷನ ಚುನಾವಣೆಯಲ್ಲಿ ತಾನು ಸ್ಪರ್ಧಿ ಅಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷನ ಚುನಾವಣೆ ಇನ್ನು ನಡೆದಿಲ್ಲ, ರಾಜ್ಯ ಘಟಕದ ಅಧ್ಯಕ್ಷನ ಚುನಾವಣೆ ಯಾವುದೇ ಸಮಯ ನಡೆಯಬಹುದು, ತಮಿಳುನಾಡು ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವೊಂದರ ಜೊತೆ ಮೈತ್ರಿ ಬೇಕೆಂದು ವರಿಷ್ಠರು ಹೇಳಿದ್ದಾರೆ ಎಂದು ತಿಳಿಸಿದರು.