30.2 C
Udupi
Saturday, February 28, 2026
spot_img
spot_img
HomeBlogರಾಜಕೀಯ ಕದನ: ನನ್ನ ಪರವಾಗಿ ದೆಹಲಿಗೆ ಯಾರೂ ಹೋಗಬೇಡಿ ಎಂದ ಡಿ.ಕೆ.ಶಿವಕುಮಾರ್

ರಾಜಕೀಯ ಕದನ: ನನ್ನ ಪರವಾಗಿ ದೆಹಲಿಗೆ ಯಾರೂ ಹೋಗಬೇಡಿ ಎಂದ ಡಿ.ಕೆ.ಶಿವಕುಮಾರ್

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಪರವಾಗಿರುವ ಶಾಸಕರು ಡಿನ್ನರ್‌ ಸಭೆ ನಡೆಸಿ, ದೆಹಲಿಗೆ ಹೋಗುವ ಸಾಧ್ಯತೆ ಕುರಿತು ಸುಳಿವು ನೀಡುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ. ಅವರಿಗೆ ಸಮಸ್ಯೆಯಿದ್ದರೆ ಹೋಗಲಿ ಎಂದು ಸ್ಪಷ್ಟಪಡಿಸಿದ್ದಾರೆ.

ಡಿಕೆಶಿ, ಶಾಸಕರು ನನ್ನ ಪರವಾಗಿ ದೆಹಲಿಗೆ ಹೋಗುವುದು ಬೇಡ ಎಂದು ಮನವಿ ಮಾಡುತ್ತೇನೆ. ಶಾಸಕರ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಲಿ. ನನ್ನ ವಿಚಾರಕ್ಕಾಗಿ ಹೋಗುವುದು ಬೇಡ ಎಂದು ಹೇಳಿದ್ದಾರೆ.

ನೀವು ಮುಖ್ಯಮಂತ್ರಿಯಾಗಬೇಕು ಎಂದು ಕೆಲ ಶಾಸಕರು ಹೇಳಿಕೆ ನೀಡಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ಆ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜತೆ ಅವರು ಯಾರೂ ಮಾತನಾಡಿಲ್ಲ. ಇನ್ನು, ಕೆಲವರು ಆಸೆ ಇಟ್ಟುಕೊಂಡಿದ್ದಾರೆ. ಹೊಸಬರಿಗೆ ಸಚಿವರಾಗುವ ಆಸೆ ಇರುತ್ತದೆ. ನಾನು, ಪರಮೇಶ್ವರ್‌, ಎಚ್.ಕೆ.ಪಾಟೀಲ್‌, ಮಹದೇವಪ್ಪ, ಸಿದ್ದರಾಮಯ್ಯ ಸೇರಿ ಹಲವರು ಈಗ ಹಳಬರಾಗಿದ್ದೇವೆ. ಚಿಕ್ಕ ವಯಸ್ಸಿನಲ್ಲೇ ಸಚಿವರಾಗಿದ್ದೇವೆ. ಹೊಸಬರು ಸಚಿವರಾಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣ, ನಾನು ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತರುತ್ತೇನೆ ಎಂದರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page