
ಕಾರ್ಕಳ : ಮಾ. 30ರಂದು ಬೆಳಿಗ್ಗೆ ವೇಳೆ ಮಿಯ್ಯಾರು ಗ್ರಾಮದ ಜೋಡುಕಟ್ಟೆ ಚರ್ಚ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸಂಭವಿಸಿದೆ.
ಕಾರ್ಕಳ ಮಂಗಳಪಾದೆಯ ಮೇರಿ ವಾಝ್ (70) ಎಂಬವರು ಮಿಯ್ಯಾರು ಚರ್ಚ್ ನಿಂದ ವಾಪಸ್ಸಾಗಿ ಜೋಡುಕಟ್ಟೆಯ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದ್ದು ಪರಿಣಾಮ ಮಹಿಳೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಬೈಕ್ ಸವಾರ ಮಿಯ್ಯಾರು ಗ್ರಾಮದ ಸಂತೋಷ್ ಅವರಿಗೂ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹವನ್ನು ಕಾರ್ಕಳ ಸಾರ್ವಜನಿಕ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ ಎಂದು ತಿಳಿದುಬಂದಿದೆ.




