
ಶ್ರೀ ಆನಂದ ತೀರ್ಥ ವಿದ್ಯಾಲಯ, ಪಾಜಕ, ಉಡುಪಿ ಇಲ್ಲಿ AICS- ASSOCIATION OF ICSE AND CBSE SCHOOLS UDUPI DISTRICT ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರಾಸ್ ಕಂಟ್ರಿ ರೇಸ್ ಸ್ಪರ್ಧೆಯಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ನ ವಿದ್ಯಾರ್ಥಿಗಳು ರನ್ನರ್ ಅಪ್ ಟ್ರೋಫಿ ಗೆಲ್ಲುವುದರ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಅಂಡರ್ 17 ಹುಡುಗಿಯರ ವಿಭಾಗದಲ್ಲಿ ಸಂಜೀವಿನಿ ಅನಿಲ್ ಹಟ್ಟಿ 4 ನೆಯ ಸ್ಥಾನ ಹಾಗೂ ಹುಡುಗರ ವಿಭಾಗದಲ್ಲಿ ಭುವನ್ ಮಾಲಾಜಿ 5 ನೆಯ ಸ್ಥಾನ, ಅಂಡರ್ 14 ಹುಡುಗಿಯರ ವಿಭಾಗದಲ್ಲಿ ಸ್ಪೂರ್ತಿ ನಾಯ್ಕ್ 2 ನೆಯ ಸ್ಥಾನ, ಪೂಜಾ ಅನಿಲ್ ಸತರಡ್ಡಿ 6 ನೆಯ ಸ್ಥಾನ, ಹುಡುಗರ ವಿಭಾಗದಲ್ಲಿ ಸುಜಲ್ ಪೂಜೇರಿ 6 ನೆಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ.
