ರಂಜಾನ್ ಗೆ ರಿಲೀಫ್ ಕೊಟ್ರೆ, ಹಿಂದೂಗಳ ಶಿವರಾತ್ರಿಗೂ ಕೊಡ್ತೀರಾ…?: ಪ್ರಮೋದ್ ಮುತಾಲಿಕ್ ಕಿಡಿ

ತೆಲಂಗಾಣ ಮತ್ತು ಆಂಧ್ರಪ್ರದೇಶದ ಸರಕಾರಗಳು ರಂಜಾನ್ ತಿಂಗಳಲ್ಲಿ ಮುಸ್ಲಿಂ ಸರಕಾರಿ ನೌಕರರಿಗೆ ಒಂದು ಗಂಟೆ ಬಿಡುವು ನೀಡಲು ತೀರ್ಮಾನಿಸಿದೆ.
ಇದೀಗ ರಾಜ್ಯದಲ್ಲೂ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎ.ಹುಸೇನ್ ಈ ವಿಚಾರವಾಗಿ ಸಿಎಂ ಅವರ ಬಳಿ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆಸಿದ ಶಿವರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ರಂಜಾನ್ ಗೆ ಮುಸ್ಲಿಂ ಸರಕಾರಿ ನೌಕರರಿಗೆ ಒಂದು ಗಂಟೆ ರಿಲೀಫ್ ನೀಡುವುದಾದರೆ, ಶಿವರಾತ್ರಿ ಸಂದರ್ಭದಲ್ಲಿ ಹಿಂದೂ ಸರಕಾರಿ ನೌಕರರಿಗೂ ಒಂದು ಗಂಟೆ ರಿಲೀಫ್ ನೀಡುತ್ತೀರಾ..? ಎಂದು ಸರಕಾರವನ್ನು ಪ್ರಶ್ನಿಸಿದ್ದಾರೆ.
ಹಿಂದೂ ಸಂಪ್ರದಾಯದಲ್ಲಿ ನಿರಂತರ ಆಚರಣೆಗಳು ಇದ್ದು, ಹಿಂದೂ ನೌಕರರು ಮನವಿ ಮಾಡಿದ್ದಲ್ಲಿ ಸರಕಾರಿ ಕಚೇರಿಗಳೇ ಖಾಲಿ ಖಾಲಿ ಆಗಿರುತ್ತದೆ. ಸಂವಿಧಾನದಲ್ಲಿ ಎಲ್ಲಾ ಧರ್ಮದ ಆಚರಣೆಗೂ ಸಮಾನ ಅವಕಾಶವಿದೆ. ಕೇವಲ ಒಂದು ಧರ್ಮದ ಸರಕಾರಿ ನೌಕರರಿಗೆ ಈ ರೀತಿಯ ಅವಕಾಶ ಮಾಡಿಕೊಡುವುದು ತಪ್ಪು, ಒಂದು ವೇಳೆ ಅನುಮತಿ ನೀಡಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.