
ತುಳು ರಂಗಭೂಮಿ ಯಲ್ಲಿ ತನ್ನ ವಿಭಿನ್ನ ಶೈಲಿಯ ಅಭಿನಯದಿಂದ ಸೌಮ್ಯ ಹೃದಯದ ನಾಯಕನಾಗಿ, ಕಂಚಿನ ಕಂಠದ ಖಳನಾಯಕನಾಗಿ ಹಲವು ರಂಗಭೂಮಿ ಯ ಪ್ರಶಸ್ತಿ ಗೆ ಭಾಜನರಾದ ಸದಾಶಿವ ಶೆಟ್ಟಿ ಅರೆಮಜಲು ಇವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಇಂದು ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.







