
ಯುವ ಸಂಗಮ ಕೌಡೂರು ಇದರ ವತಿಯಿಂದ ಉಚಿತ ಹೃದಯ ತಪಾಸಣೆ, ಚರ್ಮ ತಪಾಸಣೆ ಮತ್ತು ಆರೋಗ್ಯ ತಪಾಸಣೆ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಭುವನೇಂದ್ರ ಕಾಲೇಜಿನ ಪ್ರಾಂಶುಪಾಲರಾದಂತಹ ಡಾ| ಮಂಜುನಾಥ್ ಕೋಟ್ಯಾನ್ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ್ದು ಸಭೆಯ ಅಧ್ಯಕ್ಷತೆಯನ್ನು ಕೌಡೂರು ನಾಯರ್ ಬೆಟ್ಟು ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷರು, ಯುವಸಂಗಮದ ಗೌರವ ಸಲಹೆಗಾರರಾದ ಸುಧೀರ್ ಹೆಗ್ಡೆಯವರು ನೆರವೇರಿಸಿದರು.
ಈ ಉಚಿತ ತಪಾಸಣಾ ಕಾರ್ಯಕ್ರಮದಲ್ಲಿ ಸುಮಾರು 340ಕ್ಕೂ ಅಧಿಕ ಜನರು ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಕೌಡೂರು ವಲಯದ ಹೈಸ್ಕೂಲು ಮತ್ತು ಪಿಯುಸಿ ವಿಭಾಗದಲ್ಲಿ 85%ಕ್ಕಿಂತ ಹೆಚ್ಚು ಅಂಕ ಗಳಿಸಿದ ಸುಮಾರು 24 ವಿದ್ಯಾರ್ಥಿಗಳಿಗೆ ಈ ವೇಳೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಮೂರು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಡುಪಿಯ ಹೃದಯ ತಜ್ಞರಾದ ಡಾ. ಅನೂಪ್ ಶೆಟ್ಟಿ, ಚರ್ಮರೋಗ ತಜ್ಞರಾದ ಡಾ. ಅರುಣ್ ಕೆ ಶೆಟ್ಟಿ, ಡಾ. ಯಶೋಧರ್ ವೈ, ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಮಹಾಂತ್ ಹೆಗ್ಡೆ ಅವರು ತಪಾಸಣೆ ಮಾಡಿದರು.
ಕ್ರಿಯೇಟಿವ್ ಕಾಲೇಜಿನ ಟ್ರಸ್ಟಿ ಆದಂತಹ ಡಾ| ಗಣನಾಥ್ ಶೆಟ್ಟಿ ಪ್ರತಿಭಾ ಪುರಸ್ಕಾರವನ್ನು ನೀಡಿ ಸನ್ಮಾನಿಸಿದರು. ಯುವ ಸಂಗಮದ ಅಧ್ಯಕ್ಷರಾದಂತಹ ಪ್ರಸನ್ನ ಶೆಟ್ಟಿ ಕೌಡೂರು ಇವರು ಸ್ವಾಗತ ಕೋರಿದರು. ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರು, ಯುವಸಂಗಮದ ಉಪಾಧ್ಯಕ್ಷರಾದಂತಹ ಸುಮಿತ್ ಶೆಟ್ಟಿ ಇವರು ಪ್ರಸ್ತಾವನೆ ಸಲ್ಲಿಸಿದರು. ಯುವ ಸಂಗಮದ ಪ್ರಧಾನ ಕಾರ್ಯದರ್ಶಿಯಾದಂತಹ ನಾಗೇಶ್ ಪೂಜಾರಿಯವರು ಧನ್ಯವಾದ ಸಲ್ಲಿಸಿದರು.























































