
ಯುವಶಕ್ತಿ ಗೆಳೆಯರ ಬಳಗ ಮಾಳ ಇದರ ವತಿಯಿಂದ ಗ್ರಾಮೀಣ ಜನರಿಗಾಗಿಯೇ ಆಗಸ್ಟ್ 4 ರಂದು ಕಟ್ಟೆಬೈಲು ಗಣೇಶ್ ಶೆಟ್ಟಿಗಾರ್ ಗದ್ದೆಯಲ್ಲಿ (ಕೋಂಕ) ಕರಾವಳಿ ಭಾಗದ ತುಳುನಾಡ ಸಂಸ್ಕೃತಿಯನ್ನ ಉಳಿಸಿ ಬೆಳೆಸುವ ಮಣ್ಣಿನ ಆಟ “ಕೆಸರ್ದ ಗೊಬ್ಬು” ಎಂಬ ವಿನೂತನ ಶೈಲಿಯ ಕಾರ್ಯಕ್ರಮವನ್ನು ಆಯೋ ಜಿಸಲಾಗಿದೆ.ಬೆಳಗ್ಗೆ 9 ಗಂಟೆಗೆ ಸರಿಯಾಗಿ ಅಥಿತಿ ಅಭ್ಯಾಗತರ ಸಮ್ಮುಖದಲ್ಲಿ ಉದ್ಘಾಟನೆಗೊಂಡು,ವಿವಿಧ ಅಪರೂಪದ ಕ್ರೀಡೆಯನ್ನು ಪ್ರದರ್ಶಿಸಿ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿರುತ್ತಾರೆ











