ಶಾಸಕ ವಿ. ಸುನಿಲ್ ಕುಮಾರ್ ಸಂತಾಪ

ಕಾರ್ಕಳ: ಉದ್ಯಮಿ, ಆತ್ಮೀಯರಾದ ಬೈಲೂರಿನ ಕೃಷ್ಣರಾಜ ಹೆಗ್ಡೆ (ತಮ್ಮಣ್ಣ)ಯವರು ನಿಧನರಾಗಿರುವುದು ಅತ್ಯಂತ ದುಃಖ ಹಾಗೂ ನೋವಿನ ವಿಚಾರ. ಸಮಾಜ ಸೇವೆಯೊಂದಿಗೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ನಮ್ಮೆಲ್ಲ ಕಾರ್ಯಕ್ರಮಗಳಲ್ಲಿ ಬೆಂಬಲಿಸುತ್ತಾ, ಪ್ರೋತ್ಸಾಹ ನೀಡುತ್ತಾ, ಬೈಲೂರು ಮಾರಿಯಮ್ಮ ದೇವಸ್ಥಾನದ ಕಾರ್ಯದರ್ಶಿಯಾಗಿ, ಅನೇಕ ವರ್ಷಗಳಿಂದ ಯಶಸ್ವಿ ಉದ್ಯಮವನ್ನು ನಡೆಸಿಕೊಂಡು ಬಂದಿದ್ದ ತಮ್ಮಣ್ಣ ಇಂದು ನಮ್ಮೊಂದಿಗೆ ಇಲ್ಲ ಅನ್ನುವುದು ನಂಬಲಸಾಧ್ಯ.
ತಮ್ಮಣ್ಣ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅಗಲಿದ ಶ್ರೀಯುತರ ಆತ್ಮದ ಸದ್ಗತಿಗಾಗಿ ಮತ್ತು ಕುಟುಂಬ ವರ್ಗ ಹಾಗೂ ಬಂಧು ಮಿತ್ರರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.