
ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯುವಶಕ್ತಿ ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಯುವಶಕ್ತಿ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ ಕಾಳಿಕಾಂಬ ಕರಿಯಕಲ್ಲು ಕಾರ್ಕಳ ಹಳೆ ವಿದ್ಯಾರ್ಥಿ ಸಂಘ ಇವರ ಆಶ್ರಯದಲ್ಲಿ ಯುವಶಕ್ತಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮುದ್ದುಕೃಷ್ಣ ಮತ್ತು ರಾಧಾಕೃಷ್ಣ ಸ್ಪರ್ಧಾ ಕಾರ್ಯಕ್ರಮ ಆ.16 ರಂದು ಸಂಸ್ಥೆಯಲ್ಲಿ ಆಯೋಜನೆಗೊಂಡಿತು.
ಧರ್ಮೋ ರಕ್ಷತಿ ರಕ್ಷಿತ: ಎಂಬ ಮಾತಿನಂತೆ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಶ್ರೀ ರಾಮನ ನಡೆ, ಕೃಷ್ಣನ ನುಡಿ ನಮ್ಮೆಲ್ಲರ ಬದುಕಿನಲ್ಲಿ ಅಡವಳಡಿಸಿಕೊಳ್ಳೋಣ ಎಂಬ ಮಾತುಗಳೊಂದಿಗೆ ಕಾರ್ಯಕ್ರಮಕ್ಕೆ ಕಮಲಾಕ್ಷ ಕಾಮತ್ ಶುಭ ಹಾರೈಸಿದರು. ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಮಲಾಕ್ಷ ಕಾಮತ್ ಲೆಕ್ಕ ಪರಿಶೋಧಕರು, ಕಾರ್ಕಳ.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಸಂಸ್ಥೆಯ ಸಂಚಾಲಕರಾಗಿರುವ ಅಬ್ದುಲ್ ಖಾಲಿಕ್, ಪ್ರಶಾಂತ್ ಕೋಟ್ಯಾನ್ ನಿರ್ದೇಶಕರು ಯುವ ಶಕ್ತಿ ಎಜುಕೇಶನ್ ಸೊಸೈಟಿ ಹಾಗೂ ಪುರಸಭಾ ಅಧ್ಯಕ್ಷರು ಲಕ್ಷ್ಮಿ ಪುರಾಣಿಕ್, ನಳಿನಾಕ್ಷಿ ಹೆಗ್ಡೆ, ಚೇತನ್ ಎಸ್, ಮಂಜುನಾಥ್ ಕೋಟ್ಯಾನ್, ಮಮತಾ ಕುಲಾಲ್, ಶ್ರೀಮತಿ ಹರಿಣಿ ಉಪಸ್ಥಿತರಿದ್ದರು