ಕವನ
ಶಾಂತರಾಮ ಹೊಸ್ಕೆರೆ, ಶಿರಸಿ

ಆಚಾರ -ವಿಚಾರ-ಸಂಸ್ಕೃತಿ -ಸಂಪ್ರದಾಯ,
ಹಬ್ಬ – ಹರಿದಿನ ನಿತ್ಯ ಸತ್ಯ,
ಶುಭವ ಹೊತ್ತು ತರುವ ಸೊಬಗಿನ ಸೂರ್ಯೋದಯ,
ಸಂಪದ್ಭರಿತ ವಸಂತ ಋತುವಿನಿಂದ ಕಂಗೊಳಿಸುತಿರುವ ಮಾವು-ಬೇವಿನ ಹೊಸ ಚಿಗುರಿನ ಪ್ರಕೃತಿಯ ರಮಣೀಯ ಸೊಬಗಿನ ವಿಸ್ಮಯ,
ಮಾಮರ-ಕೋಗಿಲೆಯ ಸಂಬಂಧಗಳ ಬೆಸುಗೆಯ ಸಾಮಿಪ್ಯ,
ಕಿವಿಗಿಂಪಾಗಿ ಕೇಳಿಸುವ ಕೋಗಿಲೆಯ ಸ್ವರ ಅತೀ ಮಾಧುರ್ಯ
ಹೊಸ ಬಗೆಯ ರಂಗು-ರಂಗಿನ ಉಡುಗೆ ತೊಡುಗೆಗಳ ಶೃಂಗಾರದ ಸೌಂದರ್ಯ..
ಹಸಿರು ಮಾವಿನೆಲೆಯ ತೋರಣ,
ಮನೆಯ ಬಾಗಿಲಲ್ಲಿ ರಂಗವಲ್ಲಿಗಳ ಚಿತ್ರಣ,
ಬಗೆ-ಬಗೆಯ ಹೂ ಮಾಲೆಗಳ ಹೊಂಬಣ್ಣ,
ಮೃಷ್ಟಾನ್ನ ಭೋಜನದ ಹೂರಣ,
ಮೊಗವು ಖುಷಿಯ ಹಂಚುವ ತಾಣ,
ನೋವ ಮರೆಯೋಣ,
ಹೊಸ ನಗುಭರಿತ ನಲಿವಿನ ಬದುಕನ್ನು ಸ್ವಾಗತಿಸೋಣ,
ಎಲ್ಲರೂ ಕೂಡಿ ಹೊಸ ಹಬ್ಬವ ಆಚರಿಸೋಣ,
ಕೂಡಿ ಬೆರೆತು ಅರಿತು ಬಾಳೋಣ,
ಪ್ರೀತಿಯ ಹಂಚುತ್ತಾ ಸಾಗುತಲಿರೋಣ,
ಸರ್ವರಿಗೂ ಹೊಸ ವರುಷ-ಹೊಸ ಹರುಷದ ಸವಿಯ ಉಣಬಡಿಸುತ ಸಂಭ್ರಮ ಸಡಗರದ ಯುಗಾದಿ ಹಬ್ಬದ ಶುಭಾಶಯಗಳ ಕೋರೋಣ..



















