
ಕಾರ್ಕಳ: ಏಪ್ರಿಲ್ 16 ರಿಂದ 25 ರವರೆಗೆ ಯಕ್ಷಗಾನ ಕಾರ್ಕಳ ವತಿಯಿಂದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಆವರಣದಲ್ಲಿ ಬಾಲ ಲೀಲೆ- ಮಕ್ಕಳ ರಂಗ ಶಿಬಿರ ನಡೆಯಲಿದೆ.
8-14 ವರ್ಷದ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದ್ದು ಪ್ರವೇಶ ಶುಲ್ಕ 1,000 ರೂ ಇದೆ. ಮೊದಲು ನೋಂದಾಯಿಸಿದ ನೂರು ಮಕ್ಕಳಿಗೆ ಮಾತ್ರ ಅವಕಾಶವಿದ್ದು ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಏಪ್ರಿಲ್ 10 ರೊಳಗೆ ನೋಂದಾವಣೆ ಮಾಡಿಕೊಳ್ಳಬೇಕಾಗಿದ್ದು ನೋಂದಾವಣೆಗೆ ಬರುವಾಗ ಮಕ್ಕಳ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ಕಡ್ಡಾಯವಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿದ ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯ ಅಧಿಕಾರಿ ಪೂರ್ಣಿಮಾ ಅವರು ಹೆಚ್ಚಿನ ಮಾಹಿತಿಗಾಗಿ ಯಕ್ಷರಂಗಾಯಣ ಕಚೇರಿಗೆ ಭೇಟಿ ನೀಡಬಹುದು ಅಥವಾ 7676507443 /9900987866 /9980358653 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.




