ಯಕ್ಷದ್ರುವ ದಶಮಾನೋತ್ಸವಕ್ಕೆ 10 ಲಕ್ಷ ರೂಪಾಯಿ ದೇಣಿಗೆ ಘೋಷಣೆ

ಕಾರ್ಕಳ: ಕಳೆದ 9 ವರ್ಷಗಳಿಂದಲೂ ಪ್ರತಿವರ್ಷ ಘಟಕದ ಕಾರ್ಯಕ್ರಮಗಳನ್ನು ಕಾರ್ಕಳ ಪರಿಸರದಲ್ಲಿ ಅದ್ದೂರಿಯಾಗಿ ಮಾಡಿಕೊಂಡು ಯಕ್ಷ ಶಿಕ್ಷಣ, ಕಲಾವಿದರಿಗೆ ಗೌರವ, ಅಶಕ್ತರಿಗೆ ಧನ ಸಹಾಯ ಮಾಡಿಕೊಂಡು ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಯಕ್ಷಧ್ರುವ ಫೌಂಡೇಶನ್ ನ ಕಾರ್ಕಳ ಘಟಕ ಈ ವರ್ಷ ವಿಶೇಷವಾಗಿ ಯಕ್ಷಧ್ರುವ ದಶಮಾನೋತ್ಸವಕ್ಕೆ ಕೇಂದ್ರೀಯ ಸಮಿತಿಗೆ 10 ಲಕ್ಷ ರೂಪಾಯಿ ದೇಣಿಗೆಯನ್ನು ಕಾರ್ಕಳ ಪರಿಸರದ ದಾನಿಗಳ ಮೂಲಕ ಸಂಗ್ರಹಿಸಿ ನೀಡಲಾಗಿದೆ ಎಂದು ಘಟಕದ ಅಧ್ಯಕ್ಷರಾದ ವಿಜಯ ಶೆಟ್ಟಿಯವರು ತಿಳಿಸಿದ್ದಾರೆ.






















































