
ಬಲ್ಗೇರಿಯಾದ ಭವಿಷ್ಯಗಾರ್ತಿಯಾದ ಬಾಬಾ ವಂಗಾ ಅವರು ತಮ್ಮ ಜೀವಿವಾವಧಿಯಲ್ಲಿ (1911 – 1996) ಹೇಳಿದ ಅನೇಕ ವಿಚಾರಗಳು ಈಗಲೂ ನಿಜವಾಗುತ್ತಿವೆ. ಇದೀಗ ಅವರು ನುಡಿದ ಭವಿಷ್ಯ ಎಲ್ಲಾ ಕಡೆ ಸದ್ದು ಮಾಡುತ್ತಿದ್ದು ಅದರಲ್ಲೂ ಮುಖ್ಯವಾಗಿ ಆಕೆ ಪ್ರಾಕೃತಿಕ ವಿಕೋಪಗಳ ಬಗ್ಗೆ ಹೇಳಿರುವುದರ ಜೊತೆಜೊತೆಗೇ, ಮನುಷ್ಯರಿಂದಲೇ ಸೃಷ್ಟಿಯಾದ ಯಂತ್ರಗಳು ಮನುಷ್ಯರನ್ನೇ ನಿಷ್ಕ್ರಿಯರನ್ನಾಗಿಸಲಿವೆ ಎಂಬ ಆಘಾತಕಾರಿ ಭವಿಷ್ಯ ಎಲ್ಲರಲ್ಲೂ ಆತಂಕ ಸೃಷ್ಟಿಸಿದೆ.
ಈಗಾಗಲೆ ಎಐ ಇಡೀ ವಿಶ್ವದ ನಿದ್ದೆಗಡಿಸಿದ್ದು ವಂಗಾ ಭವಿಷ್ಯವಾಣಿ ಪ್ರಕಾರ ಮಾನವನ ಜಾಗದಲ್ಲಿ ಅಥವಾ ಹಲವು ಕೆಲಸಗಳಲ್ಲಿ ಕೃತಕ ಯಂತ್ರಗಳು ಓಡಾಡಲಿವೆ. ಇದರಿಂದ ಕೋಟ್ಯಂತರ ಜನ ಕೆಲಸ ಕಳೆದುಕೊಳ್ಳಲಿದ್ದಾರೆ. ಮಾತ್ರವಲ್ಲ ಮುಂದೊಂದು ದಿನ ಈ ಯಂತ್ರಗಳು ಮನುಷ್ಯನ ಆಡಳಿತವನ್ನೂ ನಿರಾಕರಿಸಲಿವೆ. ಮನುಷ್ಯನನ್ನು ಮೀರಿ ಹೋಗುವ ಪ್ರಯತ್ನ ಇವು ಮಾಡಲಿವೆ. ಇದನ್ನು ಮನುಷ್ಯರು ಎದುರಿಸಿದರೆ ಮಾನವರನ್ನೇ ಇವು ಬುಲ್‌ಡೋಜರ್‌ನಂತೆ ತಮ್ಮಿಷ್ಟದಂತೆ ಕೆಡವಿಕೊಂಡು ಮುಂದುವರಿಯಲಿವೆ ಎಂದು ಮಾನವಕುಲಕ್ಕೆ ಮುನ್ನೆಚ್ಚರಿಕೆಯಾಗುವಂಥ ಮಾತುಗಳನ್ನು ಹೇಳಿದ್ದಾಳೆ. ಎಐಯ ಬೆಳವಣಿಗೆಯನ್ನು ನೋಡುತ್ತಿದ್ದರೆ ಆಕೆ ಹೇಳುತ್ತಿರುವುದರಲ್ಲಿ ಹೆಚ್ಚಿನ ವಿಷಯಗಳು 2026ರಲ್ಲಿ ನಿಜವಾಗುವ ಸಾಧ್ಯತೆ ಇದೆ.
2026ರಲ್ಲಿ ಮೊದಲ ಬಾರಿಗೆ ಮಾನವರಿಗೆ ಏಲಿಯನ್ ಕುರಿತಾದ ದೊಡ್ಡ ಸಾಕ್ಷಿ ಅಥವಾ ಮಾಹಿತಿ ಸಿಗಬಹುದು. 2026ರ ನವೆಂಬರ್‌ನಲ್ಲಿ ಅನ್ಯಗ್ರಹ ಜೀವಿಗಳ ಕುರಿತಾದ ದೊಡ್ಡ ವಿಚಾರವೊಂದು ತಿಳಿದುಬರಲಿದೆ ಎಂದಿದ್ದಾರೆ. ಇದಲ್ಲದೆ 2026ರಲ್ಲಿ ಹಲವು ರೀತಿಯ ನೈಸರ್ಗಿಕ ವಿಕೋಪಗಳ ಕುರಿತಾಗಿ ಅವರು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ ದ್ವೀಪರಾಷ್ಟ್ರಗಳ ಪಾಲಿಗೆ 2026ರ ಬಹಳ ನೋವಿನ ವರ್ಷವಂತೆ. ಹಲವು ಬಾರಿ ಭೂಕಂಪನಗಳು ಸಂಭವಿಸಬಹುದು. ಹಾಗೆ ಹಲವು ಜ್ವಾಲಾಮುಖಿಗಳು ಆಗಸದೆತ್ತರಕ್ಕೆ ಚಿಮ್ಮಲಿವೆ. ಹಲವು ವರ್ಷದಿಂದ ಸುಪ್ತ ಸ್ಥಿತಿಯಲ್ಲಿರುವ ಜ್ವಾಲಾಮುಖಿ ಸ್ಫೋಟವು ಹಲವು ರೀತಿಯಾಗಿ ಅನಾಹುತಗಳ ತರಲಿವೆ ಎಂದು ಹೇಳಿದ್ದಾರೆ.





