
ಕಾರ್ಕಳ: ಜಗತ್ತು ವೇಗವಾಗಿ ಬೆಳೆಯುತ್ತಿದೆ.
ಶೈಕ್ಷಣಿಕ ವ್ಯವಸ್ಥೆಗಳು ಹಿಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಪೈಪೋಟಿಯ ಕಾಲಘಟ್ಟವನ್ನು ತಲುಪಿದೆ.
ಸಹಜವಾಗಿ ಎಲ್ಲಾ ಪೋಷಕರಿಗೂ ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಹಂಬಲವಿರುತ್ತದೆ.
ಶಾಲೆಯು ಮೌಲ್ಯಯುತ ಶಿಕ್ಷಣದೊಂದಿಗೆ ಸಂಸ್ಕೃತಿಯನ್ನು ಕಲಿಸುವ ಕಾರ್ಯವನ್ನು ಮಾಡುವ ಆಗತ್ಯವಿದೆ ಅದನ್ನು ವಿದ್ಯಾಭಾರತಿಯ ಶಾಲೆಗಳು ಮಾಡುತ್ತಿವೆ ಎಂದು ಮಾಜಿ ಸಚಿವ ಕಾರ್ಕಳದ ಶಾಸಕರಾದ ಸುನೀಲ್ ಕುಮಾರ್ ಹೇಳಿದರು.
ಅವರು ಶ್ರೀ ಜನಾರ್ದನ ವಿದ್ಯಾಮಂದಿರ ಎಳ್ಳಾರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಶ್ರೀ ಜನಾರ್ದನ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಮುಂಡಾರು ಪ್ರಸನ್ನ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಭಾರತಿ ಅಧ್ಯಕ್ಷರಾದ ಪಾಂಡುರಂಗ ಪೈ,ಐಎಎಸ್ ಅಧಿಕಾರಿ ಸದಾಶಿವ ಪ್ರಭು ಎಳ್ಳಾರೆ, ಜಿಲ್ಲಾ ಶಿಕ್ಷಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಅಶೋಕ್ ಕಾಮತ್,ಹಿರಿಯರಾದ CA ಕಮಲಾಕ್ಷ ಕಾಮತ್,ಯೋಗೀಶ್ ಮಲ್ಯ,ಉದ್ಯಮಿ ಪುರಂದರ ಪೂಜಾರಿ,ದಿನೇಶ್ ಕಿಣಿ,ವಿದ್ಯಾಭಾರತಿ ಕಾರ್ಯದರ್ಶಿ ಮಹೇಶ್ ಹೈಕಾಡಿ,ಟ್ರಸ್ಟ್ ಕಾರ್ಯದರ್ಶಿ ಸಂತೋಷ ಹೆಗ್ಡೆ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಅಶ್ವಿನಿ ಸುಕೇಶ್ ಹೆಗ್ಡೆ ಸ್ವಾಗತಿಸಿ,ಹರೀಶ್ ಶೆಟ್ಟಿ ವಂದಿಸಿದರು.
ಸವಿತಾ ಪ್ರಾರ್ಥನೆಗೈದರು.
ಸಹಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.



















