
ನವದೆಹಲಿ : ಕೇಂದ್ರ ಸರ್ಕಾರವು ಬುಧವಾರ ಮೊಬೈಲ್ ಫೋನ್ ತಯಾರಕರು ಸ್ಮಾರ್ಟ್‌ಫೋನ್‌ಗಳಲ್ಲಿ ಸೈಬರ್ ಭದ್ರತಾ ಆ್ಯಪ್ ಸಂಚಾರ್ ಸಾಥಿಯನ್ನು ಉತ್ಪಾದನೆ ವೇಳೆಯೇ ಕಡ್ಡಾಯವಾಗಿ ಪ್ರಿ-ಇನ್‌ಸ್ಟಾಲ್ ಮಾಡಬೇಕು ಎಂಬ ವಿವಾದಾತ್ಮಕ ಆದೇಶವನ್ನು ವಾಪಸ್ ತೆಗೆದುಕೊಂಡಿದೆ.
ಸರ್ಕಾರದ ಈ ಆದೇಶ ಸೋಮವಾರ ಬಹಿರಂಗವಾದ ಬೆನ್ನಲ್ಲೇ ಪ್ರತಿಪಕ್ಷಗಳು ಹಾಗೂ ಸ್ಮಾರ್ಟ್‌ಫೋನ್ ತಯಾರಕರಾದ ಆ್ಯಪಲ್ ಹಾಗೂ ಸ್ಯಾಮ್ಸಂಗ್ ವಿರೋಧ ವ್ಯಕ್ತಪಡಿಸಿದ್ದವು. ‘ಸರ್ಕಾರವು ಜನರ ಮೇಲೆ ಬೇಹುಗಾರಿಕೆ ಮಾಡುತ್ತಿದೆ. ಖಾಸಗಿತನಕ್ಕೆ ಧಕ್ಕೆ ಬರುತ್ತದೆ’ ಎಂದು ಪ್ರತಿಪಕ್ಷಗಳು ಕಿಡಿಕಾರಿದ್ದು ಇದರ ಬೆನ್ನಲ್ಲೇ, ‘ಸಂಚಾರ್ ಸಾಥಿ ಆ್ಯಪ್ ಪ್ರಿ-ಇನ್‌ಸ್ಟಾಲ್ ಕಡ್ಡಾಯ ಎಂಬ ಆದೇಶ ರದ್ದುಗೊಳಿಸಲಾಗಿದೆ’ ಎಂದು ಟೆಲಿಕಾಂ ಸಚಿವಾಲಯ ತಿಳಿಸಿದೆ.



















