
ಮೈಸೂರು: ಮೈಸೂರು ಜಯಲಕ್ಷ್ಮಿ ಪುರಂನಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಪ್ರಶ್ನೆ ಮಾಡಿದ 13 ವರ್ಷದ ಬಾಲಕನ ಮೇಲೆ ಮೂವರು ಬಾಲಕರು ದಾಳಿ ಮಾಡಿ ಬಾಲಕನ ಗುಪ್ತಾಂಗಕ್ಕೆ ಒದ್ದು ಗಂಭೀರ ಗಾಯಗೊಳಿಸಿದ ಘಟನೆ ಸಂಭವಿಸಿದೆ.
ಬಾಲಕನಿಗೆ ಪ್ರತಿನಿತ್ಯ ಹಣಕೊಡು, ಮೊಬೈಲ್ ತೆಗೆದುಕೊಂಡು ಬಾ, ನಾವು ಹೇಳಿದ ಹಾಗೇ ಮಾಡು ಎಂದು ಮೂವರು ಬಾಲಕರು ರ‍್ಯಾಗಿಂಗ್ ಮಾಡುತ್ತಿದ್ದರು. ಇದನ್ನು ಬಾಲಕ ಪ್ರಶ್ನಿಸಿದಾಗ ಅಕ್ಟೋಬರ್ 25 ರಂದು ಮೂವರು ಬಾಲಕರು ಆತನನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಇದರಿಂದ ಬಾಲಕನ ವೃಷಣಕ್ಕೆ ಗಂಭೀರ ಗಾಯವಾಗಿದೆ. ಮೂವರ ಬಾಲಕರ ವಿರುದ್ಧ ದೂರು ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದು ಬಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಬಾಲಕ ಹಾಗೂ ಆತನ ಸಂಬಂಧಿಕರು ಒತ್ತಾಯಿಸಿದ್ದಾರೆ.







